ETV Bharat / sitara

ಹಿರಿಯ ಚಲನಚಿತ್ರ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ನಿಧನ - Cinematographer SV SRIKANTH

ಬೆಂಗಳೂರಿನ ದೇವರ ಬೇಸನಹಳ್ಳಿ ಅಲ್ಲಿ ವಾಸವಾಗಿದ್ದ ಎಸ್ ವಿ ಶ್ರೀಕಾಂತ್ ವಯೋಸಹಜ ಖಾಯಿಲೆಯಿಂದ 87 ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಶ್ರೀಕಾಂತ್ ಅವರ ಅಂತ್ಯಕ್ರಿಯೆ ಇಂದು ಕಲಪಲ್ಲಿ ರುಧ್ರಭೂಮಿಯಲ್ಲಿ ನಡೆಯಲಿದೆ.

Cinematographer SV SRIKANTH no more
ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ನಿಧನ
author img

By

Published : May 8, 2020, 3:24 PM IST

ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಸುಮಾರು 50ಕ್ಕೂ ಹೆಚ್ಚು ಡಾ ರಾಜಕುಮಾರ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದವರು ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ದೇವರಬೇಸನಹಳ್ಳಿ ಅಲ್ಲಿ ವಾಸವಾಗಿದ್ದ ಎಸ್ ವಿ ಶ್ರೀಕಾಂತ್ ವಯೋಸಹಜ ಖಾಯಿಲೆಯಿಂದ 87ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಶ್ರೀಕಾಂತ್ ಅವರ ಅಂತ್ಯಕ್ರಿಯೆ ಇಂದು ಕಲಪಲ್ಲಿ ರುಧ್ರಭೂಮಿಯಲ್ಲಿ ನಡೆಯಲಿದೆ.

ಹಿರಿಯ ಛಾಯಾಗ್ರಾಹಕ ಮಧುಸೂಧನ್ ಅವರ ಸಹಾಯಕರಾಗಿ ವೃತ್ತಿ ಆರಂಭಿಸಿದ ಎಸ್ ವಿ ಶ್ರೀಕಾಂತ್, 1969 ರಲ್ಲಿ ‘ಗೆಜ್ಜೆ ಪೂಜೆ’ ಸಿನಿಮಾ ಮುಖಾಂತರ ಸ್ವತಂತ್ರ ಛಾಯಾಗ್ರಹಣಕ್ಕೆ ಕಾಲಿಟ್ಟರು. ಇವರ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅಂದಿನ ಹಿರಿಯ ಛಾಯಾಗ್ರಾಹಕ ಡಿ ವಿ ರಾಜಾರಾಂ ಇವರ ಕೋಣೆಯಲ್ಲಿ ವಾಸ ಮಾಡುತ್ತಾ ಇದ್ದರು. ಇಬ್ಬರು ಛಾಯಾಗ್ರಹಣದಲ್ಲಿ ಕೆಲಸವನ್ನು ಹಂಚಿಕೊಂಡಿದ್ದೂ ಇದೆ.

ಎಸ್ ವಿ ಶ್ರೀಕಾಂತ್ ಟ್ರಿಕ್ ಶಾಟ್ಸ್ ತೆಗೆಯುವುದರಲ್ಲಿ ಬಹಳ ಫೇಮಸ್. ಗೆಜ್ಜೆ ಪೂಜೆ ಇಂದ ಜೀವನ ಚೈತ್ರದವರೆಗೂ ಇವರು ಅನೇಕ ಸಿನಿಮಾಗಳು ಪ್ರಸಿದ್ದಿ ಆಗಿದ್ದವು. ಅದರಲ್ಲೂ ‘ಬಬ್ರುವಾಹನ’ ಡಾ ರಾಜಕುಮಾರ್ ಅವರ ಅರ್ಜುನ ಹಾಗೂ ಬಬ್ರುವಾಹನ ಪಾತ್ರಗಳು, ಅದೇ ಸಿನಿಮಾದಲ್ಲಿ ವಿವಿದ ಮೇಕಪ್ ಅಲ್ಲಿ 7 ಬಗೆಯಲ್ಲಿ ‘ಆರಾದಿಸುವೆ ಮದನಾರಿ...ಹಾಡಿಗೆ ಇವರು ಉಪಯೋಗಿಸಿದ ಟ್ರಿಕ್ ಅತ್ಯಂತ ಜನಪ್ರಿಯ ಆಯಿತು. ಸೌರ್ಸ್ ಲೈಟಿಂಗ್ ಅಲ್ಲಿ ಸಹ ಶ್ರೀಕಾಂತ್ ಸಿದ್ದ ಹಸ್ತರು.

ಎಸ್ ವಿ ಶ್ರೀಕಾಂತ್ ಅವರು ಮಾರ್ಗದರ್ಶಿ, ಗೆಜ್ಜೆ ಪೂಜೆ, ಉಪಾಸನೆ ಕನ್ನಡ ಸಿನಿಮಾಗಳ ಛಾಯಾಗ್ರಹಣಕ್ಕೆ ರಾಜ್ಯ ಪ್ರಶಸ್ತಿ ಸಹ ಪಡೆದಿದ್ದರು.

ಎಸ್ ವಿ ಶ್ರೀಕಾಂತ್ ಕೆಲವು ಸಿನಿಮಾಗಳ ನಿರ್ಮಾಣ ಮಾಡಿದ್ದರು. ಎಸ್ ವಿ ಶ್ರೀಕಾಂತ್ ಅವರ ಜನಪ್ರಿಯ ಚಿತ್ರಗಳು ಪ್ರೇಮಮಯಿ, ಮನಸ್ಸಿದ್ದರೆ ಮಾರ್ಗ, ಹಣ್ಣೆಲೆ ಚಿಗುರಿದಾಗ, ಮಾರ್ಗದರ್ಶಿ, ಕರುಳಿನ ಕರೆ, ನಮ್ಮ ಸಂಸಾರ, ಎಡಕಲ್ಲು ಗುಡ್ಡದ ಮೇಲೆ, ಬಬ್ರುವಾಹನ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.