ಕನ್ನಡ, ಹಿಂದಿ, ಮರಾಠಿ, ತೆಲುಗು ಚಿತ್ರಗಳ ಮೂಲಕ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ಅನಂತ್ ನಾಗ್. ನಾಟಕ, ಬ್ರಿಡ್ಜ್, ಕಮರ್ಷಿಯಲ್, ಕಾಮಿಡಿ ಹೀಗೆ ಎಲ್ಲಾ ಬಗೆಯ ಸಿನಿಮಾಗಳಲ್ಲಿಯೂ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಅನಂತ್ ನಾಗ್ ಸಿನಿಮಾ ಪ್ರೇಕ್ಷಕರ ನಾಡಿಮಿಡಿತವನ್ನೂ ಬಲ್ಲವರು.
12 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿನಿಮಾ ನೋಡುವ ಮಂದಿ ಕಡಿಮೆ ಎಂದಿದ್ದಾರೆ. ಯಾಕೇ ಕನ್ನಡ ಚಿತ್ರರಂಗದಲ್ಲಿ ಸಮಾಜಕ್ಕೆ ಹತ್ತಿರ ಆಗುವ ಸಿನಿಮಾಗಳು ಬರ್ತಾ ಇಲ್ಲಾ ಅನ್ನೋ ಪ್ರಶ್ನೆಗೆ ಬಹಳ ಅದ್ಭುತ ಉದಾಹರಣೆಯನ್ನ ಕೊಡುವ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಥಿತಿ ಬಗ್ಗೆ ತಿಳಿಸಿದರು.
ಕರ್ನಾಟಕದಲ್ಲಿ ಸಿನಿಮಾ ನೋಡುವರಿಗಿಂತ ಓದುವರು ಜಾಸ್ತಿ. ಆದರೆ, ಅದೇ ಆಂಧ್ರಪ್ರದೇಶದಲ್ಲಿ ಓದುವವರ ಸಂಖ್ಯೆ ಕಡಿಮೆ, ಅಲ್ಲಿ ಸಿನಿಮಾ ನೋಡುವವರ ಸಂಖ್ಯೆ ಅಧಿಕ ಅಂತಾ ಸೂಕ್ಷ್ಮವಾಗಿ ವಿವರಿಸಿದರು. ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಸಿನಿಮಾ ಬಂದರೂ ಅದನ್ನು ನೋಡುವ ಗೋಜಿಗೆ ಹೋಗಲ್ಲ ಅಂತಾ ಹಿರಿಯ ನಟ ಅನಂತನಾಗ್ ಹೇಳಿದ್ರು.