ETV Bharat / sitara

ಮೋದಿ ಹೇಳಿದ ಆ ಪದದ ಹೆಸರಲ್ಲೇ ಸಿನಿಮಾ ನಿರ್ಮಾಣ!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದು 'ಚೌಕಿದಾರ್'​ ಅನ್ನೋ ಪದ. ಈ ಹೆಸರಿನಲ್ಲಿ ರಾಷ್ಟ್ರಾದ್ಯಂತ ಬಿಜೆಪಿ ಅಭಿಯಾನ ನಡೆಸಿತ್ತು.

author img

By

Published : Jun 1, 2019, 5:48 PM IST

ಚಿತ್ರಕೃಪೆ : ಟ್ವಿಟ್ಟರ್​

ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ನಂತರ ಪ್ರಧಾನಿ ಮೋದಿ, ತಮ್ಮ ಹೆಸರಿನ ಜತೆ ಅಂಟಿಸಿಕೊಂಡಿದ್ದ 'ಚೌಕಿದಾರ್' ಪದ ಕಳಚಿದರು. ಚುನಾವಣೆಯಲ್ಲಿ ಪ್ರಬಲವಾಗಿ ಕೇಳಿ ಬಂದಿದ್ದ ಚೌಕಿದಾರ್ ಈಗ ಕನ್ನಡ ಚಿತ್ರರಂಗದಲ್ಲೂ ಧ್ವನಿಸುತ್ತಿದೆ. ವಿಶೇಷ ಅಂದ್ರೆ, ಈ ಹೆಸರಿನಲ್ಲಿ ಕನ್ನಡ ಚಿತ್ರವೊಂದು ಸೆಟ್ಟೇರುತ್ತಿದೆ.

chowkida
ನೋಂದಣಿ ಪತ್ರ

'ತಾರಕಾಸುರ', 'ರಥಾವರ' ಸಿನಿಮಾಗಳ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ 'ಚೌಕಿದಾರ್' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಫಿಲ್ಮ್ ಚೇಂಬರ್​​ನಲ್ಲಿ ಈಗಾಗಲೇ ಈ ಟೈಟಲ್​ ನೋಂದಾವಣೆ ಆಗಿದೆ. ಅಗಸ್ಟ್​​ಲ್ಲಿ 'ಚೌಕಿದಾರ್' ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಪ್ರಧಾನಿ ಮೋದಿ ಕುರಿತಾದ ವಿಚಾರಗಳೂ ಇರುತ್ತವೆ ಎನ್ನುವ ಸುಳಿವು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು.

ಈ ಚಿತ್ರದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕಿಷ್ಟು ಮಾಹಿತಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ನಾಯಕ-ನಾಯಕಿ ಯಾರು? ಬಂಡವಾಳ ಹೂಡುವರು ಯಾರು? ಎಂಬೆಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಗೋಲ್ಡನ್ ಸ್ಟಾರ್ ಅಲ್ಲ ಚೌಕಿದಾರ್ ಅಂತಿದ್ದಾರೆ ಮಳೆ ಹುಡ್ಗ...!!!!!

ಪ್ರಧಾನಿ ನರೇಂದ್ರ ಮೋದಿಯ ಟ್ರೆಂಡಿಂಗ್ ವರ್ಡ್ ಚೌಕಿದಾರ್. ಇದೀಗ ಕನ್ನಡದಲ್ಲಿ ಸಿನಿಮಾ ಆಗಿ ಬರ್ತಿದೆ.
"ಚೌಕಿದಾರ" ಅನ್ನುವ ಹೆಸರಲ್ಲಿಸಿನಿಮಾ ತಯಾರಾಗ್ತಿದ್ದು
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್ ಚಿತ್ರಕ್ಕೆ ಆಕ್ಷನ್ ಹೇಳಲಿದ್ದಾರೆ. ಇನ್ನೂ ಚೌಕಿದಾರ ಫಿಲ್ಮ್ ಚೇಂಬರ್ ನಲ್ಲಿ ಈಗಾಗಲೇ ಟೈಟಲ್ ರಿಜಿಸ್ಟ್ರಾರ್ ಆಗಿದೆ. ಅಲ್ಲದೆ ಅಗಸ್ಟ್ ನಲ್ಲಿ ಚೌಕುದಾರ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅಲ್ಲದೆ ಈ ಚಿತ್ರದಲ್ಲಿ ಪ್ರಧಾನಿ
ಮೋದಿಅವರಿಗೆ ಸಂಭಂದ ಪಟ್ಟಿರೋ ವಿಚಾರಗಳೂ ಇರುತ್ತೆ ಅನ್ನೋ ಕ್ಲ್ಯೂ ಕೊಟ್ಟಿರೋ ನಿರ್ದೇಶಕ ಈ ಚಿತ್ರದಲ್ಲಿ ಗೋಲ್ ಎನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುವ ಸಾಧ್ಯತೆಇದೆ.ಇನ್ನೂ ನಿರ್ದೇಶಕ ಚಂದ್ರಶೇಖರ್.ರಥಾವರ ತಾರಕಾಸುರ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದು ಈಗ ಗೋಲ್ಡನ್ ಸ್ಟಾರ್ ನ ಚೌಕಿದಾರ್ ಮಾಡಲು ರೆಡಿಯಾಗ್ತಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.