ಬೆಂಗಳೂರು : ಜನವರಿ ತಿಂಗಳು ಸಮೀಪಿಸುತ್ತಿದೆ ಅಂದ್ರೆ ಸಾಕು ಸಿಲಿಕಾನ್ ಸಿಟಿ ಜನರಿಗೆ ಚಿತ್ರ ಸಂತೆ ನೆನಪಾಗುತ್ತೆ. ಆದ್ರೆ ಈ ಬಾರಿ ಕಲಾ ಪ್ರೇಮಿಗಳ ಬಣ್ಣದ ಹಬ್ಬಕ್ಕೂ ಕೊರೊನಾ ಕಾರ್ಮೋಡ ಆವರಿಸಿದೆ. ಹಾಗಾದ್ರೆ ಈ ಬಾರಿ ಚಿತ್ರ ಸಂತೆ ಹೇಗೆ ನಡೆಯುತ್ತೆ ಅನ್ನೊದಕ್ಕೆ ಉತ್ತರ ಇಲ್ಲಿದೆ.
ಚಿತ್ರಗಳೆಂದ್ರೆ ಯಾರಿಗಿಷ್ಟ ಇಲ್ಲ ಹೇಳಿ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಪ್ರತಿ ವರ್ಷ ಚಿತ್ರ ಸಂತೆಗೆ ತಾ ಮುಂದು ನಾ ಮುಂದು ಅಂತ ಲಕ್ಷಾಂತರ ಕಲಾಪ್ರೇಮಿಗಳು ಈ ಕಲಾ ಹಬ್ಬಕ್ಕೆ ಸಾಕ್ಷಿಯಾಗುತ್ತಿದ್ದರು.. ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಚಿತ್ರ ಸಂತೆ ಡಿಜಿಟಲ್ ರೂಪವನ್ನು ತಾಳಿದೆ.
ಹೌದು 18 ನೇ ವರ್ಷದ ಚಿತ್ರಸಂತೆ ಜನವರಿ 3 ರಿಂದ ನಡೆಯಲಿದೆ. ಇದೇ ಮೊದಲ ಬಾರಿಗೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಬಾರಿಯ ಚಿತ್ರಸಂತೆಯನ್ನು ಕೊರೊನಾ ವಾರಿಯರ್ಸ್ಗೆ ಸಮರ್ಪಿಸಲಾಗ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿಎಂ ಚಾಲನೆ ನೀಡಲಿದ್ದು, ಕೇಂದ್ರ ಸಚಿವರು ಸೇರಿದಂತೆ ಇತರೆ ಗಣ್ಯರು ಭಾಗಿಯಗಲಿದ್ದಾರೆ.
ಇನ್ನೂ ಚಿತ್ರಸಂತೆಗೆ ಈಗಾಗ್ಲೇ ಸಕಲ ಸಿದ್ಧತೆ ಮಾಡಿಕೊಳ್ತಿದ್ದು, 1500 ಕಲಾವಿದರನ್ನು ಆಯ್ಕೆ ಮಾಡಲಾಗಿದೆ, ಇದರಲ್ಲಿ ದೇಶದ ವಿವಿಧ ರಾಜ್ಯದ ಕಲಾವಿದರು , ಹಾಗೂ ಮಲೇಷಿಯಾ, ಫ್ರಾನ್ಸ್ , ಸಿಂಗಪುರ ಸೇರಿದಂತೆ ವಿದೇಶಿ ಕಲಾವಿದರು ಕೂಡ ಆನ್ ಲೈನ್ ಪ್ರದರ್ಶನದಲ್ಲಿ ಭಾಗಿಯಾಗುತ್ತಿದ್ದರೆ. ಪ್ರತಿ ಕಾಲವಿದನ ಅತ್ಯುತ್ತಮವಾದ 10 ಕಲಾ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತೆ. 15 ಸಾವಿರಕ್ಕೂ ಹೆಚ್ಚು ಕಲಾ ಕೃತಿಗಳನ್ನು chitra sante.Org ಜಾಲತಾಣದಲ್ಲಿ ಹಾಗೂ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಲ್ಲಿ ನೋಡಬಹುದು ಅಂತ ಬಿಎಲ್ ಶಂಕರ್ ತಿಳಿಸಿರು.
ಇನ್ನು ಜನವರಿ 3 ರಂದು ಕುಮಾರಕೃಪ ರಸ್ತೆ, ಕ್ರೆಸೆಂಟ್ ರಸ್ತೆಗಳನ್ನು ಈ ಬಾರಿ ಬಂದ್ ಮಾಡೋದಿಲ್ಲ. ಕೇವಲ ಕರ್ನಾಟಕ ಚಿತ್ರ ಕಾಲ ಪರಿಷತ್ ಆವರಣದಲ್ಲಿ ಮಾತ್ರ ಸ್ಟಾಲ್ ಗಳು ಇರಲಿವೆ. ಜೊತೆಗೆ ಡಿ .ದೇವರಾಜ್ ಅರಸು ಪ್ರಶಸ್ತಿ , ಹೆಚ್ .ಕೆ ಕ್ರೇಜಿವಲ್ ಪ್ರಶಸ್ತಿ, ಎಂ .ಆರ್ಯಮೂರ್ತಿ ಪ್ರಶಸ್ತಿ ಮತ್ತು ವೈ ಸುಬ್ರಹ್ಮಣ್ಯ ರಾಜು ಪ್ರಶಸ್ತಿ ಯನ್ನು ಚಿತ್ರ ಕಲಾ ಸನ್ಮಾನ್ ಪ್ರಶಸ್ತಿ ಅಡಿಯಲ್ಲಿ ನೀಡಿ ಗೌರವಿಸಲಾಗುತ್ತೆ.