ETV Bharat / sitara

ಈ ಬಾರಿ ಚಿತ್ರಸಂತೆ ಉದ್ಘಾಟಿಸಲಿದ್ದಾರೆ ಇನ್ಫೋಸಿಸ್‌ ಸುಧಾಮೂರ್ತಿ - ಚಿತ್ರಸಂತೆ ಸುದ್ದಿ

2021ರ ಚಿತ್ರಸಂತೆಯನ್ನು ಇನ್ಫೋಸಿಸ್ ಫೌಂಡೇಶನ್‌ನ ಚೇರ್‌ಮನ್ ಸುಧಾಮೂರ್ತಿ ಉದ್ಘಾಟಿಸಲಿದ್ದಾರೆ.‌

ಈ ಬಾರಿ ಚಿತ್ರಸಂತೆಯನ್ನು ಉದ್ಘಾಟಿಸಲಿದ್ದಾರೆ ಸುಧಾಮೂರ್ತಿ

author img

By

Published : Dec 29, 2020, 3:44 PM IST

Updated : Dec 29, 2020, 5:03 PM IST

ಕೊರೊನಾ‌ ಕಾರಣದಿಂದಾಗಿ ಮೊದಲ ಬಾರಿಗೆ ಚಿತ್ರಸಂತೆಯನ್ನು ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕಲಾ ಪ್ರೇಮಿಗಳಿಗೆ ಕೊಂಚ ನಿರಾಸೆಯಾಗಿದೆ.

18ನೇ ವರ್ಷದ ಚಿತ್ರಸಂತೆ ಜನವರಿ 3 ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮವನ್ನು ಕೊರೊನಾ ವಾರಿಯರ್ಸ್​​ಗೆ ಸಮರ್ಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗುವ ಕಾರಣ ಸುಧಾಮೂರ್ತಿ ಚಾಲನೆ ನೀಡುವರು.‌

ಓದಿ : ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆಯ ಸುಂದರ ಕ್ಷಣಗಳು: ವಿಡಿಯೋ

ಚಿತ್ರಸಂತೆಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು 1,500ಕ್ಕು‌ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಕಳೆದ ಸಲ‌ ಆಯ್ಕೆಯಾಗದ 500ಕ್ಕೂ ಹೆಚ್ಚು ಕಲಾವಿದರಿಗೂ ಈ ಬಾರಿಯೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳು, ವಿದೇಶಿ ಕಲಾವಿದರೂ ಕೂಡ ಭಾಗವಹಿಸಲು ಅವಕಾಶವಿದೆ.

ಈ ಬಾರಿ ಚಿತ್ರಸಂತೆ ಉದ್ಘಾಟಿಸಲಿದ್ದಾರೆ ಇನ್ಫೋಸಿಸ್‌ ಸುಧಾಮೂರ್ತಿ

15 ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು chitrasante.org ಜಾಲತಾಣದಲ್ಲಿ ಹಾಗೂ ವಿವಿಧ ಸಾಮಾಜಿಕ‌ ಜಾಲತಾಣಗಳಲ್ಲಿ ನೋಡಬಹುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

Last Updated : Dec 29, 2020, 5:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.