ನಿನ್ನೆಯಿಂದ ಚೈತ್ರ ವಾಸುದೇವನ್ ಅಥವಾ ಚೈತ್ರಾ ಕೊಟ್ಟೂರ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿತ್ತು. ಇದಕ್ಕೆ ಇದೀಗ ತೆರೆಬಿದ್ದಿದ್ದು ಬಿಗ್ ಬಾಸ್ ಮನೆ ಪ್ರವೇಶಿಸಿರುವುದು ಚೈತ್ರಾ ಕೊಟ್ಟೂರ್ ಎಂಬುದು ಸ್ಪಷ್ಟವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಮೆಜಿಶಿಯನ್ ಅವರಿಂದ ಮ್ಯಾಜಿಕ್ ನಡೆಯುತ್ತಿದ್ದು, ಅದನ್ನು ನೋಡುತ್ತ ದೊಡ್ಮನೆ ಮಂದಿ ಖುಷಿಯಲ್ಲಿದ್ರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು, ಮನೆಮಂದಿಗೆ ಸರ್ಪ್ರೈಸ್ ಆಗಿದೆ. ಈ ಹಿಂದೆ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಆರ್ಜೆ ಪೃಥ್ವಿ ಬಿಗ್ ಬಾಸ್ ಮನೆ ಹೊಕ್ಕಿದ್ರು.
ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಯಾರು ಅಸಲಿ? ಯಾರು ನಕಲಿ ಎಂಬ ವಿಚಾರ ಚೈತ್ರಾ ಅವರಿಗೆ ಗೊತ್ತಾಗಿದೆ. ಮತ್ತೆ ಮನೆಯೊಳಕ್ಕೆ ಚೈತ್ರಾ ರಿ-ಎಂಟ್ರಿ ಕೊಟ್ಟರೆ ಸ್ಪರ್ಧಿಗಳ ನಕಲಿ ಮುಖ ಕಳಚಿ ಬೀಳುವುದು ಸತ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚೈತ್ರಾ ಕೊಟ್ಟೂರ್ ಪ್ರವೇಶ ಕುರಿತು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಮುಂದೆ ಅಸಲಿ ಆಟ ಆರಂಭವಾಗಲಿದೆ ಎಂದು ಕೂಡ ವೀಕ್ಷಕರು ಪ್ರತಿಕ್ರಿಯಿಸುತ್ತಿದ್ದಾರೆ.
