ಮನುಷ್ಯನ ಸ್ಮೃತಿಯ ವಿವಿಧತೆಯಿಂದ ಬದುಕಲ್ಲಾಗುವ ಏರುಪೇರುಗಳ ಕಥಾಹಂದರದ ಈ ಚಿತ್ರದ ಟ್ರೇಲರ್ ಕನ್ನಡ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಕ್ವಾಲಿಟಿ ಮೇಕಿಂಗ್, ಸಸ್ಪೆನ್ಸ್ ಸ್ಕ್ರೀನ್ ಪ್ಲೇ, ಅನುಭವಸ್ಥ ತಾರಾಗಣ ಸಿನಿಮಾ ಮೇಲಿನ ಭರವಸೆಯನ್ನ ಹೆಚ್ಚಿಸಿದೆ.
ಚಿತ್ರಕಥಾ ಸಿನಿಮಾದಲ್ಲಿ ಸುಜೀತ್ ರಾಥೋಡ್, ದಿಲೀಪ್ ರಾಜ್, ಬಿ.ಜಯಶ್ರೀ, ತಬಲಾ ನಾಣಿ, ಅನುಶಾ ರಾವ್ ಆ್ಯಕ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಸುಧಾರಾಣಿ ಪ್ರೇತಾತ್ಮಗಳ ಕಥೆ ಹೇಳಲಿದ್ದಾರೆ. ಅವರು ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಥ್ರಿಲ್ ನೀಡಲು ರೆಡಿಯಾಗಿದ್ದಾರೆ. ಟ್ರೇಲರ್ನಲ್ಲಿ ಕಾಣೋ ಈ ಎಲ್ಲಾ ಪಾತ್ರಗಳೂ ಕ್ಯೂರಿಯಾಸಿಟಿಯಿಂದ ಕೂಡಿವೆ.
ಅಂದ್ಹಾಗೆ ಈ ಚಿತ್ರವನ್ನ ಯಶಸ್ವಿ ಬಾಲಾದಿತ್ಯ ನಿರ್ದೇಶಿಸಿದ್ದಾರೆ. ತನ್ವಿಕ್ ಛಾಯಾಗ್ರಹಣ ಮತ್ತು ಚೇತನ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಪ್ರಜ್ವಲ್ ಎಂ. ರಾಜ 'ಚಿತ್ರಕಥಾ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹುತೇಕ ಹೊಸ ತಂತ್ರಜ್ಞರು ಕೂಡಿ ಮಾಡಿರೋ ಚಿತ್ರಕಥಾ ಇದೇ ತಿಂಗಳ 12ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ.
- " class="align-text-top noRightClick twitterSection" data="">