ETV Bharat / sitara

ಕೋವಿಡ್​​-19 ವ್ಯಾಕ್ಸಿನ್ ಪಡೆದ ಮೆಗಾಸ್ಟಾರ್ ಸೊಸೆ ಉಪಾಸನಾ ಕಾಮಿನೇನಿ

ರಾಮ್​ಚರಣ್ ಪತ್ನಿ ಉಪಾಸನಾ ಕಾಮಿನೇನಿ ಜನವರಿ 28 ರಂದು ಕೊವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋವನ್ನು ಉಪಾಸನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Upasana kamineni
ಉಪಾಸನಾ ಕಾಮಿನೇನಿ
author img

By

Published : Jan 30, 2021, 2:31 PM IST

ದೇಶಾದ್ಯಂತ ಕೋವಿಡ್​​-19 ವ್ಯಾಕ್ಸಿನ್ ಕೊವಿಶೀಲ್ಡ್​ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಕೊರೊನಾ ವಾರಿಯರ್ಸ್​ಗೆ ಈ ವ್ಯಾಕ್ಸಿನ್ ನೀಡಲಾಗುತ್ತಿದೆ. ಈಗಾಗಲೇ ಅನೇಕರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಅಪೊಲೋ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ, ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಕಾಮಿನೇನಿ ಕೂಡಾ ಗುರುವಾರ ವ್ಯಾಕ್ಸಿನ್ ಪಡೆದಿದ್ದಾರೆ.

ತಾವು ವ್ಯಾಕ್ಸಿನ್ ಪಡೆಯುತ್ತಿರುವ ಫೋಟೋವನ್ನು ಉಪಾಸನಾ ಕಾಮಿನೇನಿ ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. "ವ್ಯಾಕ್ಸಿನ್ ಪಡೆಯುತ್ತಿರುವುದಕ್ಕೆ ನನ್ನ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ. ಕೊರೊನಾ ನಿರ್ಮೂಲನೆ ಮಾಡಲು ಈ ಲಸಿಕೆಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಎಲ್ಲಾ ಕೊರೊನಾ ವಾರಿಯರ್ಸ್​ಗಳು ವ್ಯಾಕ್ಸಿನ್ ಪಡೆಯಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಹಿಂಜರಿಯಬೇಡಿ. ಕೊರೊನಾ ವಿರುದ್ಧ ಹೋರಾಡಲು ನಮ್ಮ ಸರ್ಕಾರ ಬಹಳ ಒಳ್ಳೆ ಕೆಲಸ ಮಾಡುತ್ತಿದೆ. ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ಈಗ ಇದು ದೇವಸ್ಥಾನವಾಗಿದೆ. ಕೊರೊನಾ ಹೊಡೆದೋಡಿಸಲು ಒಬ್ಬರಿಗೊಬ್ಬರು ಸಹಾಯ ಮಾಡೋಣ, ಈ ಮೂಲಕ ಎಲ್ಲರೂ ಆರೋಗ್ಯವಾಗಿರೋಣ, ಜೈಹಿಂದ್" ಎಂದು ಉಪಾಸನಾ ಸಂದೇಶ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.