ETV Bharat / sitara

‘ಬರ್ಕ್ಲಿ’ ಮೂಲಕ ದೊಡ್ಡ ಪರದೆಗೆ ಎಂಟ್ರಿ ಕೊಟ್ಟ ಸ್ಮೋಕಿಂಗ್ ಜಾಹೀರಾತಿನ ಬಾಲನಟಿ - ಸ್ಮೋಕಿಂಗ್ ಜಾಹೀರಾತಿನ ಬಾಲನಟಿ

ಕರಿಯ, ಗಣಪ, ಕರಿಯ 2 ಅದ್ದೂರಿ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಇದಾಗಿದೆ.

child artist simran natkar in kannada film Barkly
ಕನ್ನಡದ ‘ಬರ್ಕ್ಲಿ’ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಸ್ಮೋಕಿಂಗ್ ಜಾಹೀರಾತಿನ ಬಾಲನಟಿ
author img

By

Published : Apr 1, 2021, 9:34 PM IST

ಸಿನಿಮಾ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ ಜಾಹೀರಾತಿನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಬಾಲಕಿ ಸಿಮ್ರಾನ್ ನಾಟೇಕರ್ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಸರ್ಕಾರದ ಧೂಮಪಾನ ಹಾನಿಕಾರಕ ಎಂಬ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈಕೆಗೆ 'ಬರ್ಕಿ' ಸಿನಿಮಾದಲ್ಲಿ ನಟಿಸುವ ಅವಕಾಶ ಬಂದೊದಗಿದೆ. ಗಣಪ, ಕರಿಯ2 ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರೋ ಸಂತೋಷ್ ಬಾಲರಾಜ್ ನಟಿಸುತ್ತಿರುವ ಬರ್ಕ್ಲಿ ಚಿತ್ರದ ನಾಯಕಿಯಾಗಿ ಸಿಮ್ರಾನ್‌ಗೆ ಅವಕಾಶ ದೊರೆತಿದೆ.

child artist simran natkar in kannada film Barkly
ಬರ್ಕ್ಲಿ ಸಿನಿಮಾದ ಪೋಸ್ಟರ್

ವಸಿಷ್ಠ ಸಿಂಹ ಅಭಿನಯದ ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರದ ನಿರ್ದೇಶಕರಾದರೆ, ಸಾಹಸ ಪ್ರಧಾನ ಹಾಗೂ ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

ಬಹದ್ದೂರ್ ಚೇತನ್ ಕುಮಾರ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಇದಾಗಿದೆ. ಚಿತ್ರದ ಪೋಸ್ಟ್​​ ಪ್ರೊಡಕ್ಷನ್ ಕೆಲಸ ಸಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಟೀಸರ್ ಹೊರಬರಲಿದೆ ಎಂದು ಚಿತ್ರತಂಡ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.