ನಟ ಚೇತನ್ ಒಂದು ಸ್ಮಾಲ್ ಗ್ಯಾಫ್ ನಂತರ ಮತ್ತೆ ಚಿತ್ರರಂಗದ ಕಡೆ ಬಂದಿದ್ದಾರೆ. ಅತಿರಥ ಚಿತ್ರದ ನಂತರ ಸಾಮಾಜಿಕ ಹೋರಾಟದಲ್ಲಿ ಬ್ಯುಸಿಯಾಗಿದ್ದ ಚೇತನ್ ಕಳೆದ ಮಾರ್ಚ್ನಲ್ಲಿ ಹಸೆಮಣೆ ಏರಿದ್ದರು. ಲಾಕ್ಡೌನ್ ಟೈಂಮ್ನಲ್ಲಿ ಫ್ಯಾಮಿಲಿ ಜೊತೆ ಒಂದಷ್ಟು ಸಮಯ ಕಳೆದು, ಈಗ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ.
ಚೇತನ್ ನಾಯಕರಾಗಿ ಅಭಿನಯಿಸುತ್ತಿರುವ "ಮಾರ್ಗ" ಚಿತ್ರ ಇಂದು ಸೆಟ್ಟೇರಿದೆ. ಕೊರೊನಾ ಕಾರಣ ನಗರದ ಬನಗಿರಿ ದೇವಸ್ಥಾನದಲ್ಲಿ ಚಿತ್ರ ಸರಳವಾಗಿ ಸೆಟ್ಟೇರಿತು. ಪವರ್ ಸ್ಟಾರ್ ಉಪಸ್ಥಿತಿಯಲ್ಲಿ ಕಲರ್ ಪುಲ್ ಆಗಿತ್ತು. ಲಾಕ್ಡೌನ್ ನಂತರ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, "ಮಾರ್ಗ" ಚಿತ್ರಕ್ಕೆ ಕ್ಲಾಪ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ರು.
ಕೊರೊನಾ ನಂತ್ರ ಮತ್ತೆ ಚಿತ್ರರಂಗ ಆ್ಯಕ್ಟೀವ್ ಆಗ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅಪ್ಪು, ಕೊರೊನಾ ಸಮಯದಲ್ಲೂ ಮೊದಲ ಶೂಟಿಂಗ್ ಸ್ಟಾರ್ಟ್ ಮಾಡಿಸಿದ ಕಿಚ್ಚ ಸುದೀಪ್ಗೆ ಧನ್ಯವಾದ ಹೇಳಿದರು. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಶೂಟಿಂಗ್ಗಳು ಶುರುವಾಗಬೇಕಿದೆ, ಚಿತ್ರರಂಗವನ್ನೇ ನಂಬಿಕೊಂಡು ತುಂಬಾ ಜನ ಇದ್ದಾರೆ. ನಾನು ಕೂಡ ಸೆಪ್ಟೆಂಬರ್ನಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿ, "ಮಾರ್ಗ"ಚಿತ್ರ ತಂಡಕ್ಕೆ ಶುಭ ಹಾರೈಸಿದ್ರು.
ಇನ್ನು"ಮಾರ್ಗ" ಸಿನಿಮಾ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಚಿತ್ರದಲ್ಲಿ ನಟ ಚೇತನ್ ಮೂರು ಶೇಡ್ಗಳಲ್ಲಿ ಕಾಣಿಸಲಿದ್ದಾರೆ. ಅಲ್ಲದೇ ಚಿತ್ರದಲ್ಲಿ ಇಬ್ಬರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗಿದ್ದಾರೆ. ದಿಯಾ ಚಿತ್ರದ ನಂತ್ರ ಖುಷಿ "ಮಾರ್ಗ" ಚಿತ್ರದಲ್ಲಿ ಚೇತನ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿರೋದಕ್ಕೆ ಸಂತಸ ವ್ಯಕ್ಯಪಡಿಸಿದ್ರು. ಅಲ್ಲದೇ ಚಿತ್ರದಲ್ಲಿ ಏಕ್ ಲವ್ ಯಾ ಬೆಡಗಿ ರೀಷ್ಮಾ, ಆ ಚಿತ್ರ ಬಿಡುಗಡೆಗೂ ಮುನ್ನವೇ ಈ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರವನ್ನು ನವ ನಿರ್ದೇಶಕ ಮೋಹನ್ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮೋಹನ್ "ಮಾರ್ಗ" ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ ಕ್ರಾಯಾಪ್ಗು ಧರಿಸಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಸೆಪ್ಟೆಂಬರ್ ಎರಡನೇ ವಾರದಿಂದ ಶೂಟಿಂಗ್ ಶುರು ಮಾಡಲು ತಯಾರಿ ಮಾಡಿಕೊಂಡಿದೆ.