ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಡುಗಳ ಮೂಲಕ ತನ್ನದೇ ಛಾಪು ಮಾಡಿಸಿರುವ ರ್ಯಾಪರ್ ಚಂದನ್ ಶೆಟ್ಟಿ ಇಂದು 'ಸಲಿಗೆ' ಎಂಬ ವಿಭಿನ್ನ ಶೈಲಿಯ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.
ನಿಖಿಲ್ ಜ್ಯೋಷಿ ಸಲಿಗೆ ಹಾಡಿಗೆ ಸಾಹಿತ್ಯ ಬರೆದಿದ್ದು, ಚಂದನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದಾರೆ. 2019ರಲ್ಲಿ ಕೆನಡಾಗೆ ಟೂರ್ ಹೋಗಿದ್ದ ವೇಳೆ ಈ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿತ್ತು. 3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್ ಆಲ್ಬಂಗಿಂತ 'ಸಲಿಗೆ' ತುಂಬಾ ವಿಶಿಷ್ಟವಾಗಿದೆ.
ಜನರ ಅಭಿರುಚಿ ಬದಲಾಗುತ್ತಿರುತ್ತದೆ. ಮೊದಲು ಮೈಕಲ್ ಜಾಕ್ಸನ್, ನಂತರ ರೆಟ್ರೋ ಈಗ ಮತ್ತೆ ಫಂಕ್ ಹಾಡುಗಳನ್ನು ಕೇಳಲು ಬಯಸುತ್ತಾರೆ. ಹೀಗಾಗಿ, ಈ ಶೈಲಿಯಲ್ಲಿ ಸಲಿಗೆ ಆಲ್ಬಂ ಬಿಡುಗಡೆ ಮಾಡಲಾಗಿದೆ ಎಂದು ಚಂದನ್ ತಿಳಿಸಿದ್ದಾರೆ.
ಓದಿ: ಯಶಸ್ವಿ ಮುನ್ನೂರು ಸಂಚಿಕೆ ಪೂರೈಸಿದ ನಾಗಿಣಿ 2 : ತ್ರಿಶೂಲ್ ಪಾತ್ರದಾರಿ ಏನೋ ಹೇಳಿದ್ದಾರೆ ನೋಡಿ?