ETV Bharat / sitara

ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

ಕನ್ನಡದ ನಂ ಒನ್ ರ‍್ಯಾಪ್‌ ಸಾಂಗ್‌ ಹಾಡುಗಾರ ಚಂದನ್ ಶೆಟ್ಟಿ ‘ರೌಡಿ ಬೇಬಿ’ ಚಿತ್ರಕ್ಕೆ  ಧ್ವನಿಗೂಡಿಸಿದ್ದಾರೆ.

Chandan Shetty
ಚಂದನ್ ಶೆಟ್ಟಿ
author img

By

Published : Dec 4, 2019, 10:12 AM IST

ಬೆಂಗಳೂರು: ಕನ್ನಡದ ನಂ ಒನ್ ರ‍್ಯಾಪರ್​ ಚಂದನ್ ಶೆಟ್ಟಿ ‘ರೌಡಿ ಬೇಬಿ’ ಚಿತ್ರಕ್ಕೆ ಧ್ವನಿಗೂಡಿಸಿದ್ದಾರೆ.

ಸುಮುಖ ಎಂಟರ್ ಟೈನರ್ಸ್ ಹಾಗೂ ವಾರ್ ಫುಟ್ ಸ್ಟುಡಿಯೋಸ್ ಲಾಂಛನದಲ್ಲಿ ಎಸ್.ಎಸ್. ರವಿಗೌಡ ಹಾಗೂ ಶ್ಯಾಮಲಾ ರೆಡ್ಡಿ ಅವರು ನಿರ್ಮಿಸುತ್ತಿರುವ ‘ರೌಡಿ ಬೇಬಿ` ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಸಾಗು ಮುಂದೆ ಸಾಗು ಈ ಭೂಮಿ ದೊಡ್ಡದು’ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ರೆಡ್ಡಿ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿಂದೆ ‘ಪ್ರಯಾಣಿಕರ ಗಮನಕ್ಕೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರೆಡ್ಡಿ ಕೃಷ್ಣ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮಂಗಳೂರು, ಕೇರಳ, ಬೆಂಗಳೂರು ಮುಂತಾದ ಕಡೆ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ, ಚೇತನ್ ಕುಮಾರ್ ಕಿನಾಲ್ ರಾಜ್ ಬರೆದಿದ್ದಾರೆ. ಸಾಮ್ರಾಟ್ ಛಾಯಾಗ್ರಹಣ, ಪ್ರಮೋದ್ ಸೋಮರಾಜ್ ಸಂಕಲನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಎರಡು ಸಾಹಸ ಸನ್ನಿವೇಶಗಳಿದ್ದು, ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ನಿರ್ಮಾಪಕ ರವಿಗೌಡ ಅವರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ಹೀರಕೌರ್, ದಿವ್ಯರಾವ್, ಅರುಣ ಬಾಲರಾಜ್, ಅಮಿತ್, ಕೆಂಪೇಗೌಡ, ಶ್ರೀನಾಥ್ ವಸಿಷ್ಠ ಇತರರು ತಾರಗಣದಲ್ಲಿದ್ದಾರೆ.

ಚಂದನ್ ಶೆಟ್ಟಿ ಹಾಡಿದರು ರೌಡಿ ಬೇಬಿ ಚಿತ್ರಕ್ಕೆ

ಕನ್ನಡದ ನಂ ಒನ್ ರಾಪ್ ಶೈಲಿಯ ಹಾಡುಗಾರ ಚಂದನ್ ಶೆಟ್ಟಿ ರೌಡಿ ಬೇಬಿ ಚಿತ್ರಕ್ಕೆ ನಿನ್ನೆ ಧ್ವನಿಗೂಡಿಸಿದ್ದಾರೆ. ಕನ್ನಡದ ಜನಪ್ರಿಯ ನಟರುಗಳಿಗೆ ಅಷ್ಟೇ ಅಲ್ಲ ಈ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಡುವುದು. ಹೊಸ ತಂಡಕ್ಕೆ ಸಹ ಸಾಥ್ ನೀಡುತ್ತಾ ಬಂದಿದ್ದಾರೆ.

ಈಗ ಸುಮುಖ ಎಂಟೆರ್ಟೈನರ್ ಹಾಗೂ ವಾರ್ ಫುಟ್ ಸ್ಟೂಡಿಯೋಸ್ ಎಸ್ ಎಸ್ ರವಿ ಗೌಡ ಹಾಗೂ ಶ್ರೀಮತಿ ಶ್ಯಾಮಲ ರೆಡ್ಡಿ ನಿರ್ಮಾಣದ ರೌಡಿ ಬೇಬಿ (ರೌಡಿ ಬೇಬಿ ಹಾಡು ತಮಿಳಿನಲ್ಲಿ ಧನುಷ್ ಹಾಗೂ ಸಾಯಿ ಪಲ್ಲವಿ ಕುಣಿದು ಕುಪ್ಪಳಿಸಿದ ಹಾಡು ಮಾರಿ 2 ಚಿತ್ರದಲ್ಲಿ) ಚಿತ್ರ ಚಂದನ್ ಶೆಟ್ಟಿ ಹಾಡಿನೊಂದಿಗೆ ಗರಿಷ್ಟೆ ಹೆಚ್ಚಿಸಿಕೊಂಡಿದೆ. ಸಾಗು ಸಾಗು ಮುಂದೆ ಸಾಗು ಈ ಭೂಮಿ ದೊಡ್ಡದು.....ಚಂದನ್ ಶೆಟ್ಟಿ ಹಾಡಿರುವ ಹಾಡು.

ರೆಡ್ಡಿ ಕೃಷ್ಣ ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಸಹಾಯಕ ಆದವರು ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕ ಆಗಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾದಿಗಳಿಗೆ ಡಾ ವಿ ನಗೆದ್ರ ಪ್ರಸಾದ್, ಸಿಂಪಲ್ ಸುನಿ, ಭರಾಟೆ ಚೇತನ್ ಕುಮಾರ್, ಕಿನಾಲ್ ರಾಜ್ ಗೀತ ರಚನೆ ಮಾಡಿದ್ದಾರೆ.

ನಿರ್ಮಾಪಕ ರವಿ ಗೌಡ (ಈ ಹಿಂದೆ ಮಿಸ್ಟರ್ ಮೊಮ್ಮಗ, ಧ್ವಜ ಚಿತ್ರಗಳಲ್ಲಿ ಅಭಿನಯಿಸಿದವರು) ಅವರೇ ನಾಯಕ ಸಹ ಆಗಿರುವ ಈ ಚಿತ್ರಕ್ಕೆ ಸಾಮ್ರಾಟ್ ಛಾಯಾಗ್ರಹಣ, ಪ್ರಮೋದ್ ಸೋಮರಜ್ ಸಂಕಲನ, ಮುರಳಿ ನೃತ್ಯ, ಚಂದ್ರು ಸಾಹಸ ಒದಗಿಸಿದ್ದಾರೆ.

ದಿವ್ಯ ಉರುಡುಗ, ಹೀರ ಕೌರ್, ಅರುಣ ಬಾಲರಾಜ್, ಅಮಿತ್, ಕೆಂಪೆ ಗೌಡ, ಶ್ರೀನಾಥ್ ವಸಿಷ್ಠ ಹಾಗೂ ಇತರರು ತಾರಗಣದಲ್ಲಿದ್ದಾರೆ.

30 ದಿವಸಗಳ ಚಿತ್ರೀಕರಣ ಬೆಂಗಳೂರು, ಮಂಗಳೂರು, ಕೇರಳ ಹಾಗೂ ಸುತ್ತಮುತ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.