ETV Bharat / sitara

ಪಬ್​ ಮಾಲೀಕರ ವಿರುದ್ಧ ಗರಂ ಆದ ಚಂದನ್​ ಶೆಟ್ಟಿ - ಚಂದನ್​ ಶೆಟ್ಟಿ ಸುದ್ದಿ

ಬೆಂಗಳೂರಿನ ಕೆಲವು ಪಬ್​​​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವುದೇ ಇಲ್ಲ. ಆದ್ರಿಂದ ಕನ್ನಡ ಹಾಡುಗಳನ್ನ ಹಾಕಬೇಕು ಎಂದು ಪಬ್​​​ ವಿರುದ್ಧ ಚಂದನ್​ ಶೆಟ್ಟಿ ಗರಂ ಆಗಿದ್ದಾರೆ.

ಪಬ್​ ಮಾಲೀಕರ ಮೇಲೆ ಗರಂ ಆದ ಚಂದನ್​ ಶೆಟ್ಟಿ
ಪಬ್​ ಮಾಲೀಕರ ಮೇಲೆ ಗರಂ ಆದ ಚಂದನ್​ ಶೆಟ್ಟಿ
author img

By

Published : Jan 5, 2021, 9:47 PM IST

ಬೆಂಗಳೂರು ಎಂಬ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕನ್ನಡಿಗರು ಹಾಗು ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಆಗೋದು ಹೊಸತೇನಲ್ಲ. ಯಾಕೆಂದರೆ ಬೆಂಗಳೂರಿನ ಕೆಲವೊಂದು ಮಾಲ್​​ಗಳಲ್ಲಿ ಕನ್ನಡಿಗರಿಗೆ ಆಗಾಗ ಅನ್ಯಾಯ ಆಗುತ್ತಿದೆ. ಬೆಂಗಳೂರಿನ ಬಹುತೇಕ ಪಬ್​​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕೋದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಈ ಮಾತಿಗೆ ಪೂರಕವಾಗ ರ್ಯಾಪರ್ ಚಂದನ್ ಶೆಟ್ಟಿ ಧ್ವನಿ ಎತ್ತಿದ್ದಾರೆ. ಸಿಲಿಕಾನ್ ಸಿಟಿ ಪಬ್​​​ವೊಂದರಲ್ಲಿ ಕನ್ನಡ ಹಾಡುಗಳನ್ನ ಹಾಕದೇ ಬರೀ ಇಂಗ್ಲಿಷ್ ಹಾಡುಗಳನ್ನು ಹಾಕುತ್ತಿದ್ದ ಪಬ್​​ಗೆ ಹೋಗಿದ್ದ ಕನ್ನಡ ಅಭಿಮಾನಿಗಳು ಕನ್ನಡ ಹಾಡು ಹಾಕುವಂತೆ ಹೇಳಿದ್ದಾರೆ. ಆದರೆ ಆ ಪಬ್​​ನ ಸಿಬ್ಬಂದಿ ಕನ್ನಡ ಹಾಡು ಹಾಕೋದಿಲ್ಲ ಅಂತಾ ಹೇಳಿದ್ದಾರೆ.

ಗಲಾಟೆ ಹೆಚ್ಚಾಗುತ್ತಿದ್ದಂತೆ ಚಂದನ್ ಶೆಟ್ಟಿ ಹಾಡಿರುವ ಲೇಟೆಸ್ಟ್ ಆಲ್ಬಂ ಸಾಂಗ್ ಹಾಕಿದಾಗ ಅಲ್ಲಿರುವ ಕನ್ನಡಿಗರು ಕುಣಿದು ಕುಪ್ಪಳಿಸಿದ್ದಾರೆ. ಕನ್ನಡ ಹಾಡಿಗೆ ಪಬ್​ನಲ್ಲಿ ಬೇಡಿಕೆ ಇದ್ದರೂ ಕನ್ನಡ ಹಾಡು ಹಾಕದೇ ಅನ್ಯಾಯ ಮಾಡುತ್ತಿರುವ ಪಬ್ ವಿರುದ್ಧ ಚಂದನ್ ಶೆಟ್ಟಿ ಧ್ವನಿ ಎತ್ತಿದ್ದಾರೆ.

ಪಬ್​ ಮಾಲೀಕರ ಮೇಲೆ ಗರಂ ಆದ ಚಂದನ್​ ಶೆಟ್ಟಿ

ಈ ಪಬ್ ಮಾಲೀಕರಿಗೆ ಕುಡಿಯೋದಿಕ್ಕೆ ನೀರು ಬೇಕು, ನಮ್ಮ ಜಾಗ ಬೇಕು ಆದರೆ ನಮ್ಮ ಕನ್ನಡ ಹಾಡುಗಳನ್ನ ಹಾಕದೇ ಇರುವ ಪಬ್​​ಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ ಅಂತಾ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕನ್ನಡಿಗರಿಗೆ ಕರೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.