ETV Bharat / sitara

ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ ಚಾಲೆಂಜಿಂಗ್ ಸ್ಟಾರ್​​​​​ - Darshan in Bhadra Forest

ಫೋಟೋಗ್ರಫಿಗಾಗಿ ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಬಂದಿದ್ದ ನಟ ದರ್ಶನ್ ಇಂದು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಅಭಿಮಾನಿಗಳು ಮೆಚ್ಚಿನ ನಟನನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.

Challenging star Darshan
ಚಾಲೆಂಜಿಂಗ್ ಸ್ಟಾರ್​​​​​
author img

By

Published : Aug 8, 2020, 2:29 PM IST

ಶಿವಮೊಗ್ಗ: ಚಿಕ್ಕಮಗಳೂರು-ಶಿವಮೊಗ್ಗ ಗಡಿ ಭಾಗದಲ್ಲಿರುವ ಭದ್ರಾ ಅಭಯಾರಣ್ಯ ಪ್ರವಾಸಿ ಮಂದಿರದಲ್ಲಿ ನಿನ್ನೆಯಿಂದ ವಾಸ್ತವ್ಯ ಹೂಡಿರುವ ನಟ ದರ್ಶನ್ ಇಂದು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

ದರ್ಶನ್ ನೋಡಲು ಬಂದ ಅಭಿಮಾನಿಗಳ ದಂಡು

ಭದ್ರಾ ಅಭಯಾರಣ್ಯದಲ್ಲಿ ಸಫಾರಿ, ಹಾಗೂ ಫೋಟೋಗ್ರಫಿ ಮಾಡಲು ದರ್ಶನ್ ನಿನ್ನೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದರು. ನಿನ್ನೆ ಭಧ್ರಾ ಜಲಾಶಯವನ್ನು ವೀಕ್ಷಿಸಿ ನಂತರ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದರು. ದರ್ಶನ್ ಶಿವಮೊಗ್ಗದ ಭದ್ರಾ ಜಲಾಶಯಕ್ಕೆ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಐಬಿಯತ್ತ ದೌಡಾಯಿಸಿದ್ದಾರೆ. ಆದರೆ ದರ್ಶನ್ ನಿನ್ನೆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಆದರೆ ಇಂದು ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ.ದರ್ಶನ್ ಅವರನ್ನು ನೋಡಿದ ಅಭಿಮಾನಿಗಳು ಅವರಿಗೆ ಹಾರ ಹಾಕಿ ಸನ್ಮಾನಿಸಿದ್ದಾರೆ. ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ದರ್ಶನ್ ತಾಳ್ಮೆಯಿಂದಲೇ ಎಲ್ಲರೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳು ದರ್ಶನ್​​​​ಗೆ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.