ETV Bharat / sitara

ಕಾಮನ್ ಡಿಪಿ ಮೂಲಕ ಸಾರಥಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳು - Robert release on March 11

ನಟ ದರ್ಶನ್​​​​ ಇಂದು 44ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಕಾಮನ್ ಡಿಪಿ ಮೂಲಕ ಶುಭ ಕೋರಿದ್ದಾರೆ. ಈ ಬಾರಿ ಕೂಡಾ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ದರ್ಶನ್ ಅಭಿನಯದ ಬಹುನಿರೀಕ್ಷಿತ 'ರಾಬರ್ಟ್' ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ.

Darshan celebrating 44th Birthday
ದರ್ಶನ್
author img

By

Published : Feb 16, 2021, 6:44 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44ನೇ ವಸಂತಕ್ಕೆ ಕಾಲಿಟ್ಟಿರುವ ಮೆಚ್ಚಿನ ನಟನಿಗೆ ಅಭಿಮಾನಿಗಳು, ಸ್ಯಾಂಡಲ್​​ವುಡ್​ ಗಣ್ಯರು ಒಂದು ದಿನ ಮುನ್ನವೇ ಶುಭ ಕೋರಿದ್ದಾರೆ. ನಿನ್ನೆಯಿಂದಲೇ ಟ್ವಿಟ್ಟರ್, ಫೇಸ್​​​ಬುಕ್​, ವಾಟ್ಸಾಪ್​ ಸೇರಿದಂತೆ ಇನ್ನಿತರ ಸೋಷಿಯಲ್ ಮೀಡಿಯಾದಲ್ಲಿ ಕಾಮನ್​ ಡಿಪಿ ಮೂಲಕ ಅಭಿಮಾನಿಗಳು ದರ್ಶನ್​​ಗೆ ಶುಭ ಕೋರಿದ್ದಾರೆ.

Darshan celebrating 44th Birthday
44ನೇ ವಸಂತಕ್ಕೆ ಕಾಲಿಟ್ಟ ದರ್ಶನ್

ಇನ್ನು ಕಳೆದ 2 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದ ದರ್ಶನ್ ಈ ಬಾರಿ ಕೂಡಾ ನನ್ನ ಹುಟ್ಟುಹಬ್ಬ ಆಚರಣೆ ಬೇಡ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಫೇಸ್​​​ಬುಕ್ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದ ದರ್ಶನ್, "2020 ನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕೊರೊನಾ ಎಲ್ಲರಿಗೂ ಸಮಸ್ಯೆ ಉಂಟು ಮಾಡಿತು. ಇಂದಿಗೂ ಜನರು ಕೊರೊನಾ ಸಮಸ್ಯೆಯಿಂದ ಹೊರಬಂದಿಲ್ಲ. ನಿಮ್ಮ ಆರೋಗ್ಯವೇ ನನಗೆ ಮುಖ್ಯ. ನಾನು ಈ ವರ್ಷ ಮನೆಯಲ್ಲಿ ಇರುವುದಿಲ್ಲ. ದಯವಿಟ್ಟು ಯಾರೂ ಕೂಡಾ ಮನೆ ಬಳಿ ಬರುವ ತೊಂದರೆ ತೆಗೆದುಕೊಳ್ಳಬೇಡಿ. ಮಾರ್ಚ್ ನಂತರ ಪ್ರತಿ ಭಾನುವಾರ ಒಂದೊಂದು ಸ್ಥಳಕ್ಕೆ ಬಂದು ನಿಮ್ಮನ್ನು ಭೇಟಿ ಆಗುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಮನೆಯವರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ, ನೀವೂ ಕೂಡಾ ಜಾಗ್ರತೆಯಿಂದ ಇರಿ" ಎಂದು ದರ್ಶನ್ ಮನವಿ ಮಾಡಿದ್ದರು.

Darshan celebrating 44th Birthday
ಒಂದು ದಿನ ಮುನ್ನವೇ ದರ್ಶನ್​​​ಗೆ ಶುಭ ಕೋರಿದ ಅಭಿಮಾನಿಗಳು

ಇದನ್ನೂ ಓದಿ: ಕಿರಣ್‍ರಾಜ್ ಅಭಿನಯದ 'ಬಹದ್ದೂರ್ ಗಂಡು' ಚಿತ್ರಕ್ಕೆ ನಾಯಕಿಯಾದ ಯಶಾ

2002 ರಲ್ಲಿ 'ಮೆಜೆಸ್ಟಿಕ್' ಚಿತ್ರದ ಮೂಲಕ ಸ್ಯಾಂಡಲ್​​ವುಡ್ ಪ್ರವೇಶಿಸಿದ ದರ್ಶನ್, ಖ್ಯಾತ ಖಳನಟ ತೂಗುದೀಪ್ ಅವರ ಪುತ್ರ. ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಇದ್ದರೂ ದರ್ಶನ್​ ಚಿತ್ರರಂಗಕ್ಕೆ ಬರಲು ಬಹಳ ಕಷ್ಟಪಡಬೇಕಾಯ್ತು. ಅವಮಾನಗಳನ್ನು ಎದುರಿಸಿ, ಗಾಂಧಿನಗರವೆಲ್ಲಾ ಸುತ್ತಾಡಿ ಮೆಜೆಸ್ಟಿಕ್​​ನಲ್ಲಿ ನಟಿಸುವ ಅವಕಾಶ ಪಡೆದ ದರ್ಶನ್ ಇದುವರೆಗೂ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಂಡಿದ್ದಾರೆ. ದಾಸ, ಡಿಬಾಸ್, ಸಾರಥಿ ಎಂದೆಲ್ಲಾ ಅಭಿಮಾನಿಗಳು ದರ್ಶನ್ ಅವರನ್ನು ಕರೆಯುತ್ತಾರೆ.

Darshan celebrating 44th Birthday
ಈ ಬಾರಿ ಕೂಡಾ ಹುಟ್ಟುಹಬ್ಬ ಆಚರಿಸಿಕೊಳ್ಳದ ದರ್ಶನ್

ಸಿನಿಮಾ ವಿಚಾರಕ್ಕೆ ಬರುವುದಾದರೆ ದರ್ಶನ್ ಅಭಿನಯದ ಬಹುನಿರೀಕ್ಷಿತ 'ರಾಬರ್ಟ್' ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ದರ್ಶನ್ ಜೊತೆ ನಾಯಕಿಯಾಗಿ ಆಶಾಭಟ್ ನಟಿಸಿದ್ದಾರೆ. ಜಗಪತಿ ಬಾಬು, ರವಿಕಿಶನ್, ದೇವರಾಜ್, ರವಿಶಂಕರ್, ವಿನೋದ್ ಪ್ರಭಾಕರ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Darshan celebrating 44th Birthday
ಮಾರ್ಚ್​ ನಂತರ ನೀವು ಇರುವ ಕಡೆ ನಾನೇ ಬಂದು ಭೇಟಿ ಆಗುತ್ತೇನೆ ಎಂದ ಸಾರಥಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.