ಬೆಂಗಳೂರು: ಸುಗ್ಗಿ ಹಬ್ಬ ಸಂಕ್ರಾಂತಿ ಬಂತಂದ್ರೆ ಸಾಕು, ಹಳ್ಳಿಗಳಲ್ಲಿ ಇನ್ನಿಲ್ಲದ ಸಡಗರ. ಹೆಣ್ಣುಮಕ್ಕಳು ಎಳ್ಳು-ಬೆಲ್ಲ ತಿಂದು ಹಬ್ಬ ಆಚರಿಸಿದರೆ, ಗಂಡು ಮಕ್ಕಳು ಹಸು,ಕರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಆಚರಿಸೋದು ಸಾಮಾನ್ಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇವತ್ತು ಇದೇ ಸಂಭ್ರಮದಲ್ಲಿದ್ದರು.
ಪ್ರಾಣಿಪ್ರಿಯರೂ ಆಗಿರುವ ನಟ ದರ್ಶನ್ ಮೈಸೂರಿನಲ್ಲಿರುವ ತಮ್ಮ ತೂಗುದೀಪ ಫಾರ್ಮ್ಸ್‌ನಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ. ತೋಟದಲ್ಲಿ ಸಾಕಿರುವ ಹಸು,ಕರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸಿದ್ದಾರೆ. ಜೊತೆಗೆ ನೆಚ್ಚಿನ ಕುದುರೆಯನ್ನು ಹಿಡಿದು ಕಿಚ್ಚು ಹಾಯಿಸಿದ್ದು ವಿಶೇಷವಾಗಿತ್ತು.