ETV Bharat / sitara

ಸಫಾರಿ ವೇಳೆ ಹುಲಿ ಫೋಟೋ ಸೆರೆ ಹಿಡಿದ ದರ್ಶನ್​: ವಿಡಿಯೋ ವೈರಲ್​ - ಸಫಾರಿ ವೇಳೆ ಹುಲಿ ಫೋಟೋ ಸೆರೆ ಹಿಡಿದ ಚಾಲೆಂಜಿಂಗ್ ಸ್ಟಾರ್

ಇತ್ತೀಚೆಗಷ್ಟೇ ದರ್ಶನ್ ತಮ್ಮ ಸ್ನೇಹಿತರೊಂದಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡಿದ್ದರು. ಇದೀಗ ದರ್ಶನ್​ ಹುಲಿಯ ಫೋಟೋವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿರುವ ವಿಡಿಯೋವೊಂದು ವೈರಲ್​ ಆಗುತ್ತಿದೆ. ದರ್ಶನ್​ ಛಾಯಾಗ್ರಹಣ ಮಾಡುತ್ತಿರುವ ವಿಡಿಯೋವನ್ನು ಅವರ ಸ್ನೇಹಿತರು ಸೆರೆ ಹಿಡಿದಿದ್ದಾರೆ.

challenging-star-darshan-captured-tiger-photo
ಸಫಾರಿ ವೇಳೆ ಹುಲಿ ಫೋಟೋ ಸೆರೆ ಹಿಡಿದ ದರ್ಶನ್​: ವಿಡಿಯೋ ವೈರಲ್​
author img

By

Published : Jan 12, 2021, 5:15 PM IST

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅವರಿಗೆ ಪ್ರಾಣಿ-ಪಕ್ಷಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿಯೇ ದಚ್ಚು ಬಿಡುವು ಸಿಕ್ಕಾಗ ಕ್ಯಾಮರಾ ಹಿಡಿದು ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಅಡ್ಡಾಡುತ್ತಿರುತ್ತಾರೆ.

ಸಫಾರಿ ವೇಳೆ ಹುಲಿ ಫೋಟೋ ಸೆರೆ ಹಿಡಿದ ದರ್ಶನ್​: ವಿಡಿಯೋ ವೈರಲ್​

ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್​ಗೆ ವೈಲ್ಡ್​ ಲೈಫ್ ಫೋಟೋಗ್ರಫಿ ಅಂದರೆ ಬಲು ಇಷ್ಟ. ಅದೇ ಕಾರಣಕ್ಕೆ ದರ್ಶನ್​ ಈ ಹಿಂದೆ ಕೀನ್ಯಾಗೆ ಹೋಗಿ ಅಲ್ಲಿನ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಸುತ್ತಾಡುತ್ತಾ ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿದು ಹಿಂತಿರುಗಿದ್ದರು.

ಇತ್ತೀಚೆಗಷ್ಟೇ ದರ್ಶನ್ ತಮ್ಮ ಸ್ನೇಹಿತರೊಂದಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡಿದ್ದರು. ಇದೀಗ ದರ್ಶನ್​ ಹುಲಿಯ ಫೋಟೋವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವಿಡಿಯೋವೊಂದು ವೈರಲ್​ ಆಗುತ್ತಿದೆ. ದರ್ಶನ್​ ಛಾಯಾಗ್ರಹಣ ಮಾಡುತ್ತಿರುವ ವಿಡಿಯೋವನ್ನು ಅವರ ಸ್ನೇಹಿತರು ಸೆರೆ ಹಿಡಿದಿದ್ದಾರೆ.

ದರ್ಶನ್​ ಅವರ ಈ ವಿಡಿಯೋ ಯಾವಾಗ ತೆಗೆಯಲಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ಆಪ್ತ ಮೂಲಗಳ ಪ್ರಕಾರ ಕಳೆದ ವಾರ ದರ್ಶನ್​ ಕಬಿನಿಗೆ ಹೋಗಿದ್ದರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.