ಧನ್ವೀರ್, ಬಜಾರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಯುವ ನಟ. ಇಂದು ಧನ್ವೀರ್ ಹುಟ್ಟಿದ ದಿನ. 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧನ್ವೀರ್ ತಮ್ಮ ಎರಡನೇ ಸಿನಿಮಾ 'ಬಂಪರ್' ತಯಾರಿಯಲ್ಲಿದ್ದಾರೆ.
ಧನ್ವೀರ್ ಹುಟ್ಟುಹಬ್ಬದ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ವೀರ್ ಅಭಿನಯದ ಬಂಪರ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ಪೋಸ್ಟರ್ನಲ್ಲಿ 'ಬಂಪರ್' ಸಿನಿಮಾದ ಕಥೆ ಜೊತೆಗೆ ಧನ್ವೀರ್ ಕ್ಯಾರೆಕ್ಟರ್ ಪರಿಚಯಿಸುವ ಹಾಡು ಇದೆ. ರಾಜಾರಾಜಿನಗರದ ತಮ್ಮ ನಿವಾಸದಲ್ಲಿ ಧನ್ವೀರ್ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು. ಇನ್ನು 'ಬಂಪರ್' ಸಿನಿಮಾವನ್ನು 'ಅಲೆಮಾರಿ' ಸಿನಿಮಾ ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. 'ಭರಾಟೆ' ಸಿನಿಮಾ ನಿರ್ಮಾಪಕ ಸುಪ್ರೀತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
- " class="align-text-top noRightClick twitterSection" data="">
ಇದೊಂದು ಲವ್ ಸ್ಟೋರಿ ಜೊತೆ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದ್ದು, ಧನ್ವೀರ್ ಈ ಚಿತ್ರದಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರಕ್ಕೆ ನಿರ್ದೇಶಕ ಚೇತನ್ ಕುಮಾರ್ ಚಿತ್ರಕಥೆ ಬರೆದಿದ್ದು, ಉತ್ತರ ಕರ್ನಾಟಕ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ಚಿತ್ರೀಕರಣ ಜರುಗಲಿದೆ. ಮುಂದಿನ ತಿಂಗಳು ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರವನ್ನು ತಮಿಳು, ತೆಲುಗಿನಲ್ಲಿ ಕೂಡಾ ರೀಮೇಕ್ ಮಾಡಲಾಗುತ್ತಿದೆ. ಸದ್ಯಕ್ಕೆ ಚಿತ್ರತಂಡ ಉಳಿದ ಪಾತ್ರವರ್ಗದ ಆಯ್ಕೆಯಲ್ಲಿ ಬ್ಯುಸಿ ಇದೆ.