ಸೆಲಬ್ರಿಟಿಗಳು ಕಾರು ಹಾಗೂ ದುಬಾರಿ ಬೆಲೆಯ ಬೈಕ್ ಖರೀದಿಸುವುದು ಹೊಸ ವಿಷಯವೇನಲ್ಲ. ಆದರೆ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಎಲ್ಲಾ ಸೆಲಬ್ರಿಟಿಗಳು ಹೊಂದಿರುವುದಿಲ್ಲ. ಸ್ಯಾಂಡಲ್ವುಡ್ನ ಕೆಲವೇ ಕೆಲವು ನಟರ ಬಳಿ ಇಂತಹ ಕಾರು ಇದೆ.
ಕಳೆದ ವರ್ಷ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ್ದಾರೆ. ಈಗಾಗಲೇ ಅವರ ಬಳಿ ಜಾಗ್ವರ್, ಲ್ಯಾಂಬೋರ್ಗಿನಿ, ರೇಂಜ್ ರೋವರ್, ಆಡಿ, ಕೋಟಿ ಬೆಲೆ ಬಾಳುವ ಸ್ಪೋರ್ಟ್ಸ್ ಕಾರು ಇವೆ. ಹೀಗೆ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಹೊಂದಿರುವ ಯಜಮಾನನ ಮನೆಗೆ ಮತ್ತೊಂದು ಕೋಟಿ ಬೆಲೆ ಬಾಳುವ ಕಾರು ಬಂದಿದೆ. ಕಳೆದ ವರ್ಷ 5 ಕೋಟಿ ರೂಪಾಯಿ ಬೆಲೆಯ ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ದರ್ಶನ್ ಖರೀದಿಸಿದ್ದರು. ಇದೀಗ ಲೇಟೆಸ್ಟ್ ವರ್ಷನ್ ಹಾಗೂ ಸ್ಪೋರ್ಟ್ಸ್ ಬೆಸ್ಟ್ ಲ್ಯಾಂಬೋರ್ಗಿನಿ ವುರ್ಸ್ ಎಂಬ ಹಳದಿ ಬಣ್ಣದ ಕಾರನ್ನು ದರ್ಶನ್ ಖರೀದಿದ್ದಾರೆ.
ಎರಡು ದಿನಗಳ ಹಿಂದೆ ದರ್ಶನ್ ಈ ಕಾರು ದಾಸನ ಮನೆಗೆ ಬಂದಿದೆ. ನಾಲ್ಕು ಜನರು ಕುಳಿತುಕೊಳ್ಳುವ ಈ ಕಾರು ರಿಮೋಟ್ ಕಂಟ್ರೋಲ್ ನಿಂದ ಕೂಡಿದೆ. 12 ನಿಮಿಷಕ್ಕೆ ಬರೋಬ್ಬರಿ 100 ಕಿ.ಮೀ ವೇಗ ತಲುಪಬಹುದಾದ ಐಶಾರಾಮಿ ಕಾರು ಇದಾಗಿದೆ. ಈ ಕಾರಿನ ಬೆಲೆ 3.5 ಕೋಟಿ ರೂಪಾಯಿ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಈ ಕೋಟಿ ಬೆಲೆ ಬಾಳುವ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರು ಲಾಂಗ್ ಡ್ರೈವ್ ಮಾಡಿದ್ದಾರೆ.