ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಹಾಗೂ ಪರಿಸರ ಪ್ರೇಮಿ. ಅಷ್ಟೇ ಅಲ್ಲ ಈ ದಾಸನಿಗೆ ದೈವ ಭಕ್ತಿ ಕೂಡಾ ಹೆಚ್ಚು .ಅದರಲ್ಲೂ ಮೈಸೂರು ಚಾಮುಂಡೇಶ್ವರಿ ಮತ್ತು ಚಾಮರಾಜಪೇಟೆಯ ಬಂಡೆ ಮಾಕಳಮ್ಮ ಅಂದ್ರೆ ದರ್ಶನ್ಗೆ ಇನ್ನಿಲ್ಲದ ಭಕ್ತಿ.
ಪ್ರತಿ ತಿಂಗಳು ತಪ್ಪದೆ ದರ್ಶನ್ ಬಂಡೆ ಮಾಕಾಳಮ್ಮ ದೇವಾಲಯಕ್ಕೆ ಪೂಜೆ ಸಾಮಗ್ರಿಗಳನ್ನು ಕಳಿಸಿ ತಮ್ಮ ಕುಟುಂಬದ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ಅಲ್ಲದೆ ವರ್ಷಕ್ಕೆ ಒಂದು ಬಾರಿ ದೇವಾಲಯಕ್ಕೂ ಬಹಳ ಅವಿನಾಭಾವ ಸಂಬಂಧ. ಈ ದೇವಾಲಯಕ್ಕೆ ಕೆಲವು ದಿನಗಳ ಹಿಂದೆ ದರ್ಶನ್ ಸಿಡ್ಜ್ ತಳಿಯ ಎರಡು ನಾಯಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಆರು ತಿಂಗಳ ಮರಿಗಳನ್ನು ಕಾಳಮ್ಮ ದೇವಾಲಯಕ್ಕೆ ಕೊಟ್ಟಿದ್ದ ದರ್ಶನ್ ಆ ನಾಯಿಮರಿಗಳಿಗೆ ಗುಂಡ ಮತ್ತು ರೀಟಾ ಎಂದು ಪ್ರೀತಿಯಿಂದ ಹೆಸರು ಇಟ್ಟಿದ್ದಾರೆ.
ಈಗ ನಾಯಿಗಳಿಗೆ ಒಂದು ವರ್ಷ ಐದು ತಿಂಗಳಾಗಿದ್ದು ದೇವಾಸ್ಥಾನದ ಸುತ್ತ ಓಡಾಡಿಕೊಂಡಿವೆ .ಅಲ್ಲದೆ ದೇವಾಲಯದಲ್ಲಿ ಎಲ್ಲರ ಕೇಂದ್ರಬಿಂದುವಾಗಿವೆ. ಈ ನಾಯಿಮರಿಗಳನ್ನು ಮಾತ್ರವಲ್ಲ ದೇವಸ್ಥಾನಕ್ಕೆ ಲವ್ ಬರ್ಡ್ಸ್ ಹಾಗೂ ಪಾರಿವಾಳಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ದರ್ಶನ್.