ETV Bharat / sitara

ಸಂಚಾರಿ ವಿಜಯ್ ನೆನಪಲ್ಲಿ ಗಿಳಿ ದತ್ತು ಪಡೆದ ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ - sanchaari vijay memory

ದಿ.ಸಂಚಾರಿ ವಿಜಯ್ ನೆನಪಲ್ಲಿ ಚಕ್ರವರ್ತಿ ಚಂದ್ರಚೂಡ್, ಗಿಳಿಯೊಂದನ್ನು ದತ್ತು ಪಡೆದಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು​​​, ‘ಸಂಚಾರಿ ವಿಜಯ್ ನಿನಗೆ ಗಿಳಿ ಅಂದ್ರೆ ಇಷ್ಟ. ಅದಕ್ಕೆ ನಿನ್ನ ಹೆಸರಿನಲ್ಲೊಂದು ಗಿಳಿ ತಗೊಂಡಿದ್ದೀನಿ, ನೋಡಿ ಸ್ವಾಮಿ’ ಎಂದು ಬರೆದುಕೊಂಡಿದ್ದಾರೆ..

Chakravarthy Chandrachud adopted parrot bird
ಸಂಚಾರಿ ವಿಜಯ್ ನೆನಪಲ್ಲಿ ಗಿಳಿ ದತ್ತು ಪಡೆದ ಸ್ನೇಹಿತ ಚಕ್ರವರ್ತಿ ಚಂದ್ರಚೂಡ್
author img

By

Published : Jun 17, 2021, 1:05 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ. ಮಂಗಳವಾರ ಮುಂಜಾನೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದರು. ಇದೀಗ ಅವರ ನೆನಪಲ್ಲಿ ಮಾಜಿ ಪತ್ರಕರ್ತ ಮತ್ತು ನಟ, ಬಿಗ್​ಬಾಸ್​ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್, ಗಿಳಿಯೊಂದನ್ನು ದತ್ತು ಪಡೆದಿದ್ದಾರೆ.

Chakravarthy Chandrachud in big boss house
ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್

ಸಂಚಾರಿ ವಿಜಯ್ ಮತ್ತು ಚಕ್ರವರ್ತಿ ಚಂದ್ರಚೂಡ್ ಇಬ್ಬರೂ ಹಲವು ವರ್ಷಗಳ ಗೆಳೆಯರು. ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ, ಮೇಲೊಬ್ಬ ಮಾಯಾವಿ ಎಂಬ ಚಿತ್ರದಲ್ಲೂ ಇಬ್ಬರೂ ಜತೆಯಾಗಿ ನಟಿಸಿದ್ದರು. ಸಂಚಾರಿ ವಿಜಯ್​ಗೆ ಗಿಳಿ ಬಹಳ ಇಷ್ಟವಾದ ಪಕ್ಷಿಯಂತೆ. ಹಾಗಾಗಿ ಅವರ ನೆನಪಲ್ಲಿ ಇಂದಿರಾ ಪ್ರಿಯದರ್ಶಿನಿ ಮೃಗಾಲಯದಿಂದ ಗಿಳಿಯೊಂದನ್ನು ದತ್ತು ಪಡೆದಿದ್ದಾರೆ ಚಂದ್ರಚೂಡ್.

ಇದನ್ನೂ ಓದಿ: ಬಿಗ್​ಬಾಸ್​ ನೋಡುಗರಿಗೆ ಸಿಹಿ ಸುದ್ದಿ: ಮತ್ತೆ ಶುರುವಾಗಲಿದೆ ದೊಡ್ಮನೆ ಆಟ.!?

ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್, ‘ಸಂಚಾರಿ ವಿಜಯ್ ನಿನಗೆ ಗಿಳಿ ಅಂದ್ರೆ ಇಷ್ಟ. ಅದಕ್ಕೆ ನಿನ್ನ ಹೆಸರಿನಲ್ಲೊಂದು ಗಿಳಿ ತಗೊಂಡಿದ್ದೀನಿ, ನೋಡಿ ಸ್ವಾಮಿ’ ಎಂದು ಹೇಳಿದ್ದಾರೆ.

ಭಾನುವಾರದಿಂದ ಬಿಗ್ ಬಾಸ್​​ 8ನೇ ಸೀಸನ್​​​​ನ ಎರಡನೇಯ ವರ್ಷನ್ ಪ್ರಾರಂಭವಾಗಲಿದ್ದು, ಇದರಲ್ಲಿ ಮತ್ತೆ ಭಾಗವಹಿಸಲು ಚಂದ್ರಚೂಡ್ ತೆರಳಿದ್ದಾರೆ. ಈಗಾಗಲೇ ಅವರು ಕ್ವಾರಂಟೈನ್​​​ನಲ್ಲಿದ್ದು, ಶನಿವಾರ ಮನೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.