ಸ್ಯಾಂಡಲ್ವುಡ್ ಬಹುನಿರೀಕ್ಷಿತ 'ಕುರುಕ್ಷೇತ್ರ' ಸಿನಿಮಾದಿಂದ ಕೆಲವು ದಿನಗಳ ಹಿಂದೆ ಮೊದಲ ಲಿರಿಕಲ್ ವಿಡಿಯೋ ಹಾಡೊಂದು ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ಧುರ್ಯೋಧನನ ಪಾತ್ರ ಮಾಡಿರುವ ದರ್ಶನ್ ಹಾಗೂ ಮೇಘನಾ ರಾಜ್ ಇಬ್ಬರೂ ಜೊತೆಗಿರುವ 'ಚಾರುತಂತಿ' ಹಾಡಿನ ಮೇಕಿಂಗ್ ನಿಜಕ್ಕೂ ಅದ್ಭುತವಾಗಿದೆ. 'ಚಾರುತಂತಿ ನಿನ್ನ ತನುವು..ನುಡಿಸಬರುವೆನು ದಿನ.. ಎಂಬ ಸಾಲಿನಿಂದ ಆರಂಭವಾಗುವ ಈ ಹಾಡನ್ನು ಬಿಡುಗಡೆಯಾದ ಎರಡೇ ದಿನಗಳಲ್ಲಿ ಸುಮಾರು 7 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಈ ಸುಂದರವಾದ ಹಾಡಿಗೆ ಧ್ವನಿಯಾಗಿದ್ದಾರೆ.
ರನ್ನನ ಗದಾಯುದ್ಧ ಪುಸ್ತಕ ಆಧಾರಿತ ಈ ಸಿನಿಮಾದ ಚಿತ್ರಕಥೆಯನ್ನು ಜೆ.ಕೆ.ಭಾರವಿ ಬರೆದಿದ್ದಾರೆ. ಮುನಿರತ್ನ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬಿಡುಗಡೆಯಾಗಲಿದೆ.