ಸ್ಯಾಂಡಲ್ವುಡ್ನಲ್ಲಿ ದಿನೇ ದಿನೇ ಹೊಸ ರೀತಿಯ ಸಿನಿಮಾಗಳು ಬರುತ್ತಿವೆ. ಅದರಲ್ಲೂ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾಗಳಿಗೆ ಕನ್ನಡ ಸಿನಿ ರಸಿಕರು ಕೂಡಾ ಚಪ್ಪಾಳೆ ತಟ್ಟಿ ಜೈ ಎನ್ನುತ್ತಿದ್ದಾರೆ. ಇದೀಗ 'ತೂತು ಮಡಿಕೆ' ಎಂಬ ಹೆಸರಿನ ಪಕ್ಕಾ ಹಳ್ಳಿ ಸೊಗಡಿನ ಟೈಟಲ್ ಇಟ್ಟುಕೊಂಡು ಚಿತ್ರತಂಡವೊಂದು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ.
- " class="align-text-top noRightClick twitterSection" data="">
ಈ ಹೊಸಬರ ಸಿನಿಮಾಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಶುಭ ಕೋರಿದ್ದಾರೆ. ಸಿನಿಮಾದ ಪೋಸ್ಟರ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಗುಡ್ಲಕ್ ಹೇಳಿದ್ದಾರೆ. ಇದೊಂದು ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ ಆಗಿದ್ದು, 'ಗೊಂಬೆಗಳ ಲವ್' ಖ್ಯಾತಿಯ ಪಾವನ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಚಂದ್ರ ಕೀರ್ತಿ ಎಂಬುವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿ ಪ್ರಿಯರ ಗಮನ ಸೆಳೆದಿರುವ 'ತೂತು ಮಡಿಕೆ' ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎಎಸ್ಜಿ ಮತ್ತು ಡಾಲರ್ ಎಂಬುವವರು ಬರೆದಿದ್ದಾರೆ. ಈ ಹಿಂದೆ ಸಿಲಿಕಾನ್ ಸಿಟಿ, ಮೂಕವಿಸ್ಮಿತ, ನನ್ನ ಹಾಡು ನನ್ನದು, ಕಿಸ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಅನುಭವ ಚಂದ್ರಕೀರ್ತಿ ಅವರಿಗೆ ಇದೆ. 'ಬೆಲ್ಬಾಟಂ' ಖ್ಯಾತಿಯ ರಘು ನಿಡುವಳ್ಳಿಯವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದರೆ, ಸ್ವಾಮಿನಾಥನ್ ಸಂಗೀತ ನೀಡಲಿದ್ದಾರೆ. ಇನ್ನು ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
![Shivarajkumar wishes Tootu madike team](https://etvbharatimages.akamaized.net/etvbharat/prod-images/kn-bng-01-thuthu-madike-cinemakke-shivanna-support-video-7204735_09122019162547_0912f_1575888947_479.jpg)