ETV Bharat / sitara

ನಾನು ಆ ಸಿನಿಮಾವನ್ನು 4-5 ಬಾರಿ ನೋಡಿದ್ದೇನೆ, ಈಗ ಮತ್ತೆ ನೋಡುತ್ತೇನೆ...ಸೆಂಚುರಿ ಸ್ಟಾರ್ - ಅಭಿನಯ ಭಾರ್ಗವನ ಹುಟ್ಟುಹಬ್ಬ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ 1993 ರಲ್ಲಿ ಬಿಡುಗಡೆಯಾದ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ನಿಷ್ಕರ್ಷ' ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ನೋಡಲು ನಾನು ಕೂಡಾ ಕಾತರನಾಗಿದ್ದೇನೆ ಎಂದು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಹೇಳಿದ್ದಾರೆ.

ಸೆಂಚುರಿ ಸ್ಟಾರ್
author img

By

Published : Sep 11, 2019, 7:21 PM IST

ಸೆಪ್ಟೆಂಬರ್ 18 ಎಂದರೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಹಬ್ಬ. ಅಂದು ಅಭಿನಯ ಭಾರ್ಗವನ ಹುಟ್ಟುಹಬ್ಬ. ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಅಭಿಮಾನಿಗಳು ತಮ್ಮ ಆರಾಧ್ಯ ನಟನ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಡಾ. ವಿಷ್ಣುವರ್ಧನ್ ಅಭಿಮಾನಿಗಳು ಅವರ ಬರ್ತ್​ ಡೇಯನ್ನು ತಮ್ಮದೇ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ವಿಷ್ಣು ಹುಟ್ಟುಹಬ್ಬದ ವಿಶೇಷವಾಗಿ ಅವರ ಅಭಿನಯದ 1993 ರಲ್ಲಿ ತೆರೆ ಕಂಡ 'ನಿಷ್ಕರ್ಷ' ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ಮಾಪಕ ಬಿ.ಸಿ. ಪಾಟೀಲ್ ಹೈ ಟೆಕ್ನಾಲಜಿ, ಕಲರಿಂಗ್ ಹಾಗೂ ಡಿಜಿಟಲ್ ಸೌಂಡ್​​​​​ನೊಂದಿಗೆ ಸೆಪ್ಟೆಂಬರ್ 20 ರಂದು ಈ ಚಿತ್ರವನ್ನು ರೀ-ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸ್ಯಾಂಡಲ್​​​ವುಡ್ ಮಂದಿ ಮತ್ತೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಕೂಡಾ ಈ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. '25 ವರ್ಷಗಳ ನಂತರ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ನಾನು 4-5 ಬಾರಿ ಈ ಸಿನಿಮಾವನ್ನು ನೋಡಿದ್ದೇನೆ. ಈಗ ಮತ್ತೆ ನೋಡುತ್ತೇನೆ, ನೀವೆಲ್ಲರೂ ಸಿನಿಮಾ ನೋಡಿ' ಎಂದು ಹೇಳಿದ್ದಾರೆ.

Intro:ನಿಷ್ಕರ್ಷ ಸಿನಿಮಾವನ್ನ ನಾನು ಐದು ಬಾರಿ ನೋಡಿದ್ದೇ ಶಿವರಾಜ್ ಕುಮಾರ್!!

ಕನ್ನಡ ಚಿತ್ರರಂಗದ ಮೇರು ಡಾ ವಿಷ್ಣುವರ್ಧನ್ ಅಭಿನಯದ, ಸೂಪರ್ ಹಿಟ್ ಥ್ರಿಲ್ಲರ್ ಸಿನಿಮಾ ನಿಷ್ಕರ್ಷ ವನ್ನು, ರೀ- ರಿಲೀಸ್ ಆಗೋದಿಕ್ಕೆ ರೆಡಿಯಾಗಿದೆ...1993 ರಲ್ಲಿ ತೆರೆಕಂಡ ನಿಷ್ಕರ್ಷವನ್ನು ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ, ಹೈ ಟೆಕ್ನಾಲಾಜಿ ಕಲರಿಂಗ್ ಹಾಗು ಡಿಜಿಟಲ್ ಸೌಂಡ್ ನೊಂದಿಗೆ, ಸೆಪ್ಟೆಂಬರ್ 20 ರಂದು ರಿಲೀಸ್ ಆಗ್ತಾ ಇದೆ..ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ, ಕೆಲ ನಟರು ಕೂಡ ಈ‌ ಸಿನಿಮಾ ನೋಡದಿಕ್ಕೆ ಕಾತುರರಾಗಿದ್ದಾರೆ..Body:ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 25 ವರ್ಷಗಳ ನಂತ್ರ, ಮತ್ತೆ ಈ ಸಿನಿಮಾ ನೋಡೋದಿಕ್ಕೆ ವೇಟ್ ಮಾಡುತ್ತಿದ್ದಾರೆ.. 1993 ರಲ್ಲೇ ಶಿವರಾಜ್ ಕುಮಾರ್ ನಿಷ್ಕರ್ಷ ಸಿನಿಮಾವನ್ನ ಐದು ಬಾರಿ ನೋಡಿದ್ದೇ, ಈಗ ಮತ್ತೆ ಡಿಜಿಟಲ್ ಸೌಂಡ್ ನೊಂದಿಗೆ ಈ ಸಿನಿಮಾವನ್ನ ನೋಡ್ತಿನಿ ಅಂತಾ ಶಿವರಾಜ್ ಕುಮಾರ್ ಹೇಳಿದ್ರು..

ಬೈಟ್ : ಶಿವರಾಜ್ ಕುಮಾರ್, ನಟConclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.