ಸುದೀಪ್ ಜತೆ 'ಬಿಲ್ಲ ರಂಗ ಭಾಷ' ಸಿನಿಮಾಗೂ ಮುಂಚೆ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಚಿತ್ರಕ್ಕೆ ಕಥೆ ಸಿದ್ಧಪಡಿಸುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಬ್ಯಾನರ್ನ ಈ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಈಗಾಗಲೇ ಮುಗಿದಿದೆ. ಸದ್ಯ ಚಿತ್ರತಂಡ ಕೆಲವು ಪಾತ್ರಗಳಿಗಾಗಿ ಹಂಟಿಂಗ್ ಶುರುಮಾಡಿದೆ.
ಚಿತ್ರದಲ್ಲಿ ಕಿಚ್ಚನ ಜೊತೆ 3 ರಿಂದ 7 ವರ್ಷದ ಹಣ್ಣು ಮಗುವಿನ ಪಾತ್ರವಿರಲಿದೆ. ಈ ಪಾತ್ರಕ್ಕೆ ಸೂಕ್ತವಾಗುವ ಪುಟ್ಟ ಕಲಾವಿದೆಯ ಆಯ್ಕೆಗೆ ಅನೂಪ್ ಅಡಿಷನ್ ಕರೆದಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, 'ಸಿನಿಮಾದಲ್ಲಿ ನಟಿಸಲು ಆಸಕ್ತಿ ಇರುವ 3-7 ಏಳು ವರ್ಷ ವಯಸ್ಸಿನ ಮಗುವಿನ ಫೋಟೊ ಇಮೇಲ್ ಮಾಡಿ ಎಂದಿದ್ದಾರೆ.
ಈ ಫೋಟೊಗಳ ಪೈಕಿ ಆಯ್ದ ಮಕ್ಕಳನ್ನು ಅಕ್ಟೋಬರ್ನಲ್ಲಿ ನಡೆಯಲಿರುವ ಆಡಿಷನ್ಗೆ ಕರೆಯಲಿದ್ದೇವೆ ಎಂದು ಅನೂಪ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಇನ್ನೂ ಹೆಸರಿಡದ ಈ ಚಿತ್ರ, ಕೋಟಿಗೊಬ್ಬ 3 ಮುಗಿದ ನಂತರ ಸೆಟ್ಟೇರಲಿದೆ. ಬಹುಭಾಷೆಯ ಈ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡ್ತಿದ್ದಾರೆ.