ETV Bharat / sitara

ಬರ್ತ್​ಡೇಗಾಗಿ ಕೈಯಲ್ಲಿ ಬಂದೂಕು ಹಿಡಿದು ಬಂದ 'ಬಂಪರ್' ಹುಡುಗ - Dhanveer Starring Bumper film

ಹರಿ ಸಂತು ನಿರ್ದೇಶನದಲ್ಲಿ ಧನ್ವೀರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬಂಪರ್​' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸೆಪ್ಟೆಂಬರ್​ 8, ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ ಬಿಡುಗಡೆ ಮಾಡಲಾಗಿದ್ದು ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

Bumber boy Dhanveer came with Gun
'ಬಂಪರ್' ಹುಡುಗ ಧನ್ವೀರ್​
author img

By

Published : Sep 7, 2020, 1:38 PM IST

ಸ್ಯಾಂಡಲ್​​ವುಡ್​​​​ನಲ್ಲಿ ಯುವನಟರ ದರ್ಬಾರ್ ಜೋರಾಗಿದೆ. 'ಬಜಾರ್' ಸಿನಿಮಾ ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ ಧನ್ವೀರ್, ಈ ಚಿತ್ರದ ಬಳಿಕ ಕಾಣೆಯಾಗಿದ್ದರು. ಕಳೆದ ವರ್ಷದ ಹುಟ್ಟುಹಬ್ಬದಂದು 'ಬಂಪರ್' ಸಿನಿಮಾವನ್ನು ಧನ್ವೀರ್ ಅನೌನ್ಸ್ ಮಾಡಿದ್ದರು. ಈ ವರ್ಷ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಬಂಪರ್ ಟೀಸರ್ ಬಿಡುಗಡೆ ಆಗಿದೆ.

'ಬಂಪರ್' ಟೀಸರ್

ಈ ಟೀಸರ್​​​ನಲ್ಲಿ ಧನ್ವೀರ್​ ಕೈಯ್ಯಲ್ಲಿ ಬಂದೂಕು ಹಿಡಿದು, ಎದುರಾಳಿಗೆ ಶೂಟ್ ಮಾಡುತ್ತಾ ಥೇಟ್ ಬಾಂಡ್ ಹೀರೋ ರೇಂಜ್​​​​​​ನಲ್ಲಿ ನಡೆದು ಬರುತ್ತಾರೆ. ಕಾಲೇಜ್​​​​​​​​​​​ ಕುಮಾರ್ ಸಿನಿಮಾ ಬಳಿಕ ಬೇಡಿಕೆ ಹೆಚ್ಚಿಸಿಕೊಂಡಿರುವ ನಿರ್ದೇಶಕ ಹರಿ ಸಂತು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾ ಆಗಿದ್ದು ಧನ್ವೀರ್​​ನನ್ನು ಮಾಸ್ ಇಮೇಜ್​​​​ನಲ್ಲಿ ತೋರಿಸಲು ರೆಡಿಯಾಗಿದ್ದಾರೆ.

Bumber boy Dhanveer came with Gun
ಧನ್ವೀರ್​

ನಿಶಾ ವೆಂಕಟ್ ಹಾಗೂ ಸುಪ್ರೀತ್ ಜೊತೆಯಾಗಿ ಈ 'ಬಂಪರ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್​​​​​ ಸಂಗೀತವಿದ್ದು ನವೀನ್ ಕುಮಾರ್ ಕ್ಯಾಮರಾ ಕೈ ಚಳಕ ಇದೆ. ಈ ಚಿಕ್ಕ ಟೀಸರ್​​​​ಗೆ ಚಿತ್ರತಂಡ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ನಾಯಕಿ ಹಾಗೂ ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ. ಶೀಘ್ರವೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.