ETV Bharat / sitara

ಇಂದು 'ಬುದ್ಧಿವಂತ-2' ಚಿತ್ರದ ಮುಹೂರ್ತ: ಚಿತ್ರತಂಡಕ್ಕೆ ಪ್ರಿಯಾಂಕ ಉಪೇಂದ್ರ ವಿಶ್​

author img

By

Published : May 24, 2019, 1:25 PM IST

2008ರಲ್ಲಿ ಬಿಡುಗಡೆಯಾದ 'ಬುದ್ಧಿವಂತ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 'ಬುದ್ಧಿವಂತ-2' ಚಿತ್ರ ತಯಾರಾಗುತ್ತಿದೆ. ಇಂದು ಚಿತ್ರದ ಮುಹೂರ್ತ ನೆರವೇರಿದ್ದು ಉಪೇಂದ್ರ ಜೊತೆ ಮೇಘನಾ ರಾಜ್​ ನಟಿಸುತ್ತಿದ್ದಾರೆ.

'ಬುದ್ಧಿವಂತ-2'

'ನಾನವನಲ್ಲ ನಾನವನಲ್ಲ' ಎಂಬ ಡೈಲಾಗ್ ಕೇಳಿದೊಡನೆ ನೆನಪಾಗುವುದು ಉಪೇಂದ್ರ. 'ಬುದ್ಧಿವಂತ' ಚಿತ್ರದ ಈ ಡೈಲಾಗ್ ಇಂದಿಗೂ ಭಾರೀ ಫೇಮಸ್. ರಮಾನಾಥ್ ಋಗ್ವೇದಿ ನಿರ್ದೇಶನದ ಈ ಸಿನಿಮಾ 2008 ರಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು.

ಇದೀಗ 'ಬುದ್ಧಿವಂತ-2' ಸಿನಿಮಾ ಬರುತ್ತಿದೆ. 10 ವರ್ಷಗಳ ನಂತರ ತಯಾರಾಗುತ್ತಿರುವ ಈ 'ಬುದ್ಧಿವಂತ-2 ಚಿತ್ರದಲ್ಲಿ ಉಪೇಂದ್ರ ಜೊತೆಗೆ ಮೇಘನಾ ರಾಜ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮೇಘನಾ ಜೊತೆ 'ಪಂಚತಂತ್ರ' ಖ್ಯಾತಿಯ ಸೋನಾಲ್ ಮಾಂತೆರೋ ಕೂಡಾ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಮಕ್, ಅಯೋಗ್ಯ, ಬೀರ್​​​​​ಬಲ್ ಸಿನಿಮಾಗಳ ಖ್ಯಾತಿಯ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆಯ ಟಿ.ಆರ್​​​. ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮೌರ್ಯ ಬಿ.ಎನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಪ್ರಿಯಾಂಕ ಉಪೇಂದ್ರ ಚಿತ್ರದ ಫಸ್ಟ್​​​ ಪೋಸ್ಟರನ್ನು ತಮ್ಮ ಟ್ವಿಟರ್​​​​ನಲ್ಲಿ ಶೇರ್ ಮಾಡುವ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲು ಚಿತ್ರಕ್ಕೆ 'ಪಿತಾಮಹ' ಎಂದು ಹೆಸರಿಡಲು ಚಿಂತಿಸಿದ್ದು ಆದರೆ ಕೊನೆಗೆ 'ಬುದ್ಧಿವಂತ-2' ಹೆಸರೇ ಫೈನಲ್ ಆಗಿದೆ. ಇಂದು ಬನಶಂಕರಿಯ ದೇವಸ್ಥಾನವೊಂದರಲ್ಲಿ 'ಬುದ್ಧಿವಂತ-2' ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಲಿದ್ದು ಯೋಗರಾಜ್​ ಭಟ್ ಹಾಗೂ ವಿ.ಮನೋಹರ್ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ವಿಶೇಷ ಎಂದರೆ ಉಪೇಂದ್ರ ಎದುರಿಗೆ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ.

Intro:Body:

buddhivanata 2

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.