ಅಭಿನಯ ಚತುರ ಸತೀಶ್ ನೀನಾಸಂ ಹಾಗೂ ಬಜಾರ್ ಹುಡ್ಗಿ ಅಧಿತಿ ಪ್ರಭುದೇವ ಅವರು ಅಭಿನಯದ 'ಬ್ರಹ್ಮಚಾರಿ' ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ.
ಈಗಾಗಲೇ ಚಿತ್ರತಂಡ ಡಬ್ಬಿಂಗ್ನಲ್ಲಿ ಬ್ಯುಸಿ ಆಗಿದ್ದು, ಸತೀಶ್ ನೀನಾಸಂ ಅವರು ತಮ್ಮ ಭಾಗದ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಇನ್ನೂ ಚಿತ್ರದ ಕೆಲವು ಪಾತ್ರಗಳ ಡಬ್ಬಿಂಗ್ ಮುಗಿದರೇ ಚಿತ್ರದ ಮಾತುಗಳ ಜೋಡಣೆ ಕಾರ್ಯ ಮುಗಿಯಲಿದೆ. ಡಬಲ್ ಎಂಜಿನ್ನಂತಹ ಹ್ಯೂಮರಸ್ ಚಿತ್ರ ನಿರ್ದೇಶಿಸಿದ್ದ ಚಂದ್ರಮೋಹನ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸತೀಶ್ ಹಾಗೂ ಚಂದ್ರಮೋಹನ್ ಕಾಂಬಿನೇಷನ್ ವರ್ಕ್ ಔಟ್ ಹಾಗೋದು ಗ್ಯಾರಂಟಿ ಎನ್ನುತ್ತಿದ್ದಾರೆ ಗಾಂಧಿನಗರದ ಜನ.
'ಬ್ರಹ್ಮಚಾರಿ' ಚಿತ್ರದ ಟೀಸರ್ ಈಗಾಗಲೇ ಸಖತ್ ಸೌಂಡ್ ಮಾಡಿದ್ದು, ವರ್ಜಿನ್ ಬ್ರಹ್ಮಚಾರಿ ಅಚಾರವಾದ್ರು ಏನಪ್ಪ ಅಂತ ಸಿನಿಪ್ರಿಯರು ಬ್ರಹ್ಮಚಾರಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಮಂಡ್ಯ ಹೈದ ನಾನು 100% ವರ್ಜಿನ್ ಅಂತ ಹೇಳ್ಬಿಟ್ಟು ಇಬ್ಬರು ನಾಯಕಿಯರ ಜೊತೆ ಡ್ಯುಯೆಟ್ ಹಾಡಿದ್ದು, ಚಿತ್ರದ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಶೀಘ್ರದಲ್ಲೇ ಟ್ರೈಲರ್ ಲಾಂಚ್ ಮಾಡಲಿದೆ. ಗಣಪನ ಹಬ್ಬಕ್ಕೆ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.