ಹೈದರಾಬಾದ್ : ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಿನ್ನೆ ಅಧಿಕೃತವಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಈ ತಾರಾ ಜೋಡಿ ಮದುವೆಗೆ ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ನಟ-ನಟಿಯರು ಕೂಡ ಶುಭ ಕೋರುತ್ತಿದ್ದಾರೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹದ ಸುಂದರ ಕ್ಷಣಗಳನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
ಬಾಲಿವುಡ್ ನಟಿ ಆಲಿಯಾ ಭಟ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ಅಲಿ ಅಬ್ಬಾಸ್ ಜಾಫರ್, ದೀಪಿಕಾ ಪಡುಕೋಣೆ, ಕರಿಷ್ಮಾ ಕಪೂರ್, ಫರ್ಹಾನ್ ಅಖ್ತರ್, ಪ್ರೀತಿ ಜಿಂಟಾ, ರಣವೀರ್ ಸಿಂಗ್, ಸ್ವರಾ ಭಾಸ್ಕರ್, ಅನುರಾಗ್ ಕಶ್ಯಪ್, ಮಲೈಕಾ ಅರೋರಾ, ಕಪಿಲ್ ಶರ್ಮಾ, ಶೂಜಿತ್ ಸಿರ್ಕಾರ್, ಭೂಮಿ ಪಡ್ನೇಕರ್, ನೇಹಾ ಧೂಪಿಯಾ, ರಾಜ್‌ಕುಮಾರ್ ರಾವ್, ಹೃತಿಕ್ ರೋಷನ್, ಸೋನಮ್ ಕಪೂರ್ ಸೇರಿದಂತೆ ಹಲವು ತಾರೆಯರು ನವಜೋಡಿಯ ಮದುವೆಗೆ ಶುಭ ಕೋರಿದ್ದಾರೆ.
ಕತ್ರಿನಾ ಆಪ್ತ ಗೆಳತಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ನಲ್ಲಿ, ನಿಮ್ಮಿಬ್ಬರನ್ನು ನೋಡಿ ತುಂಬ ಖುಷಿ ಆಗುತ್ತಿದೆ. ನನ್ನ ಸ್ನೇಹಿತೆಯ ಮದುವೆ. ಇಬ್ಬರಿಗೂ ಅಭಿನಂದನೆಗಳು. ನಿಮ್ಮದು ಪರ್ಫೆಕ್ಟ್ ಜೋಡಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜೀವನ ಪರ್ಯಂತ ನಿಮ್ಮಿಬ್ಬರ ನಡುವೆ ನಗು, ನಿಷ್ಠೆ, ಪ್ರೀತಿ, ಗೌರವ, ಸಹಬಾಳ್ವೆ ಹೀಗೆ ಇರಲಿ ಎಂದು ದೀಪಿಕಾ ಪಡುಕೋಣೆ ವಿಶ್ ಮಾಡಿದ್ರೆ, ಓಹ್ ಮೈ ಗಾಡ್, ನೀವಿಬ್ಬರು ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀರಿ ಎಂದು ಆಲಿಯಾ ಭಟ್ ಕಮೆಂಟ್ ಮಾಡಿದ್ದಾರೆ.
ಮದುವೆಯಲ್ಲಿ ಕತ್ರಿನಾ ಸುಂದರವಾದ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು ಮತ್ತು ವಿಕ್ಕಿ ಕೌಶಲ್ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದರು.