ETV Bharat / sitara

ಬಾಲಿವುಡ್‌ ಹಿರಿಯ ನಟಿ ಸೈರಾ ಬಾನುಗೆ ಅನಾರೋಗ್ಯ; ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು - ಬಾಲಿವುಡ್‌ ಸುದ್ದಿ

ಬಾಲಿವುಡ್ ನಟಿ ಸೈರಾ ಬಾನು ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮುಂಬೈನ ಹಿಂದುಜಾ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.

Bollywood actress Saira Banu is admitted in ICU at Hinduja hospital
ಬಾಲಿವುಡ್‌ ಹಿರಿಯ ನಟಿ ಸೈರಾ ಬಾನುಗೆ ಅನಾರೋಗ್ಯ; ಮುಂಬೈನ ಹಿಂದುಜಾ ಆಸ್ಪತ್ರೆಯ ಐಸಿಯುಗೆ ದಾಖಲು
author img

By

Published : Sep 1, 2021, 2:01 PM IST

ಮುಂಬೈ: ಬಾಲಿವುಡ್ ಹಿರಿಯ ನಟಿ ಸೈರಾ ಬಾನು ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮುಂಬೈನ ಹಿಂದುಜಾ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. 3 ದಿನಗಳ ಹಿಂದೆಯೂ ಸೈರಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಖ್ಯಾತ, ಹಿರಿಯ ನಟಿ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರನ್ನು ಐಸಿಯುಗೆ ಶಿಫ್ಟ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೈರಾ ಬಾನು, ಬಾಲಿವುಡ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಭಾರತೀಯ ಸಿನಿಮಾ ಕ್ಷೇತ್ರದಲ್ಲಿನ ಅತ್ಯಂತ ಜನಪ್ರಿಯ ನಟಿಯರಲ್ಲಿ ಇವರೂ ಕೂಡ ಒಬ್ಬರು. ಬಾನು ಹಿಂದಿ ಚಿತ್ರರಂಗದಲ್ಲಿ 1963 ರಿಂದ 1969 ರವರೆಗೆ ಮೂರನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಹಾಗೂ 1971 ರಿಂದ 1976 ರವರೆಗೆ ನಾಲ್ಕನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 1966 ರಲ್ಲಿ ನಟ ದಿಲೀಪ್ ಕುಮಾರ್ ಅವರನ್ನು ವರಿಸಿದ್ದರು.

ಇದನ್ನೂ ಓದಿ: ದಿಲೀಪ್ ಕುಮಾರ್ ರೂಂನಿಂದ ಹಾಲ್​ವರೆಗೂ ಮಾತ್ರ ಓಡಾಡಬಲ್ಲರು: ಪತಿ ಆರೋಗ್ಯದ ಮಾಹಿತಿ ಹಂಚಿಕೊಂಡ ಸೈರಾ ಬಾನು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.