ತಿರುವನಂತಪುರಂ (ಕೇರಳ): ಬಾಲಿವುಡ್ನ ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಅಜಯ್ ದೇವಗನ್ ವಿಶ್ವಪ್ರಸಿದ್ಧ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.
ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಗೆ ಶ್ರೀಗಂಧದ ತಿಲಕ, ತಲೆಯಲ್ಲಿ ಇರುಮುಡಿ ಹೊತ್ತು ಅಜಯ್ ದೇವಗನ್ ಇದೇ ಮೊದಲ ಶಬರಿಮಲೆಗೆ ಆಗಮಿಸಿದ್ದು, ಅಯ್ಯಪ್ಪನ ದರ್ಶನ ಪಡೆದು ಪುನೀತರಾದರು.
14 ಸದಸ್ಯರ ತಂಡದೊಂದಿಗೆ ಇಂದು ಬೆಳಗ್ಗೆ 11 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ನಟನನ್ನು ತಿರುವಾಂಕೂರು ದೇವಸ್ವಂ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ವಿ. ಕೃಷ್ಣಕುಮಾರ್ ಆತ್ಮೀಯವಾಗಿ ಬರಮಾಡಿಕೊಂಡರು. 18 ಮೆಟ್ಟಿಲುಗಳನ್ನೇರಿದ ನಟ, ದೇವಾಲಯದ ಆವರಣದಲ್ಲಿ ಸುಮಾರು 30 ನಿಮಿಷಗಳ ಕಾಲ ವಿಶ್ರಾಂತಿ ಪಡೆದರು.
ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಮುಂದಿನ 10-12 ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ
ಅಜಯ್ ದೇವಗನ್ ಮುಂಬರುವ ಚಿತ್ರ 'ಶಿವಾಯ್ 2' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಜೊತೆಗೆ 'ಆರ್ಆರ್ಆರ್', 'ಗಂಗೂಬಾಯಿ ಕಥಿವಾಡಿ', 'ಮೈದಾನ್' ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳು ತೆರೆ ಕಾಣಬೇಕಿದೆ.