ಕನ್ನಡ ಚಿತ್ರರಂಗದ ಮೇರು ನಟ, ರೆಬಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನಗಲಿ ಒಂದೂವರೆ ವರುಷಗಳಾಗುತ್ತಾ ಬಂತು. ಆದರೂ ಅವರ ನೆನಪು ಅಜರಾಮರ.
ಅಂಬರೀಶ್ ಅವರ ನೆನಪುಗಳು ಎಲ್ಲ ಜನರ ಮನಸ್ಸಲ್ಲಿ ಹಸಿರಾಗಿದೆ. ಇಂದು ಅಂಬರೀಶ್ ಅವರ ಜನುಮದಿನ. ಎಲ್ಲರೂ ರೆಬಲ್ ಸ್ಟಾರ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಅಂಬಿ ಜನ್ಮದಿನಕ್ಕೆ ಎಲ್ಲರೂ ಕೋರಿದ ಶುಭಾಶಯದ ಸುರಿಮಳೆಯೇ ಸಾಕ್ಷಿ.
ಹಿರಿತೆರೆಯ ಕಲಾವಿದರುಗಳ ಜೊತೆಗೆ ಕಿರುತೆರೆಯ ಕಲಾವಿದರು ಕೂಡಾ ಅಂಬಿಗೆ ಶುಭಾಶಯ ಕೋರಿದ್ದಾರೆ. ನಿರೂಪಣೆಯ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅನುಶ್ರೀ ಅವರು ಅಂಬರೀಶ್ ಅವರೊಂದಿಗಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಹ್ಯಾಪಿ ಬರ್ತ್ ಡೇ ಸರ್.. ಇಂದಿಗೂ ನೀವು, ನಿಮ್ಮ ಮಾತು, ನಿಮ್ಮ ಬೈಗುಳ, ತಮಾಷೆ ಎಲ್ಲವೂ ಮನಸಲ್ಲಿ ಹಸಿರಾಗಿದೆ.. ನಮ್ಮ ನಗುವಿನಲ್ಲಿ ನೀವಿದ್ದೀರಿ… ಲವ್ ಯೂ ಆಲ್ವೇಸ್ ಅಂಬರೀಶ್ ಅಂಕಲ್ ಎಂದು ಬರೆದುಕೊಂಡಿದ್ದಾರೆ.
ರಾಧಾ ರಮಣ ಧಾರಾವಾಹಿಯಲ್ಲಿ ಅವನಿ ಪಾತ್ರಧಾರಿಯಾಗಿ ಅಭಿನಯಿಸಿದ್ದ ಆಶಿತಾ ಚಂದ್ರಪ್ಪ ಅವರು ಕೂಡಾ ರೆಬಲ್ ಸ್ಟಾರ್ ಒಂದಿಗಿನ ಫೋಟೋ ಹಾಕಿದ್ದಾರೆ. ಯಾವಾಗ ನನಗೆ ಮನಸ್ಸಿಗೆ ತುಂಬಾ ಬೇಸರ ವಾಗುತ್ತಿತ್ತೋ ನಿಮ್ಮ ಬಳಿ ಓಡೋಡಿ ಬರುತ್ತಿದ್ದೆ. ನೀವು ನೀಡುವ ಒಂದು ಹಗ್ ಬೇಸರವನ್ನೆಲ್ಲಾ ಮರೆ ಮಾಚಿಸುತ್ತಿತ್ತು. ಆದರೆ, ಇಂದು ನನಗಾಗುವ ಬೇಸರವನ್ನು ಹಂಚಿಕೊಳ್ಳಲು ನೀವು ನನ್ನ ಬಳಿಯಿಲ್ಲ. ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುವೆ. ನನಗೆ ಗೊತ್ತಿದೆ, ನೀವು ಖಂಡಿತಾ ಸ್ವರ್ಗದಲ್ಲಿ ಪಾರ್ಟಿ ಮಾಡುತ್ತಿರುತ್ತೀರಿ. ಸ್ವರ್ಗದಲ್ಲಿರುವ ಎಲ್ಲಾ ಜನರು ತುಂಬಾನೇ ಲಕ್ಕಿ, ಯಾಕೆಂದರೆ ಅಲ್ಲಿ ನೀವಿರುತ್ತೀರಿ. ಮಾತ್ರವಲ್ಲ ಅಮ್ಮನೂ ಅಲ್ಲೇ ಇದ್ದಾಳೆ. ಹ್ಯಾಪಿ ಬರ್ತ್ ಡೇ ಇನ್ ಹೆವನ್ ಅಂಬಿ ಅಂಕಲ್ ಎಂದು ಬರೆದು ಕೊಂಡಿದ್ದಾರೆ.