ETV Bharat / sitara

ಸ್ಯಾಂಡಲ್​ವುಡ್​​​​ಗೆ ಆ್ಯಕ್ಷನ್ ಕಟ್ ಹೇಳಲು ಬಂದ್ರು ಬಯೋಕೆಮಿಸ್ಟ್ರಿ ಪ್ರೊಫೆಸರ್​​​​​​​​​​​​​​​​​​ - Guru C Bandi production Veeraputra

ವಿಜಯ್ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ವೀರಪುತ್ರ' ಸಿನಿಮಾ ಟೀಸರ್ ಬಿಡುಗಡೆ ಆಗಿದೆ. ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ. ದೇವರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

Veeraputra movie
'ವೀರಪುತ್ರ'
author img

By

Published : Sep 7, 2020, 12:50 PM IST

ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರ್​​​ ಮೂಲಕ ಗುರು ಸಿ. ಬಂಡಿ ನಿರ್ಮಾಣದಲ್ಲಿ ಡಾ. ದೇವರಾಜ್​ ನಿರ್ದೇಶಿಸಿರುವ 'ವೀರಪುತ್ರ' ಚಿತ್ರದ ಟೀಸರ್ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದೆ. ಚಿತ್ರದಲ್ಲಿ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

Veeraputra movie
'ವೀರಪುತ್ರ' ನಿರ್ದೇಶಕ ಡಾ. ದೇವರಾಜ್

'ವೀರಪುತ್ರ' ನಿರ್ದೇಶಕ ಡಾ. ದೇವರಾಜ್​, ಬಯೋಕೆಮಿಸ್ಟ್ರಿ ಪ್ರೊಫೆಸರ್​. ದಶಕಗಳ ಹಿಂದೆ ಕಲಬುರಗಿಯಲ್ಲಿ ನಡೆದ ನೈಜಘಟನೆಯನ್ನು ಆಧರಿಸಿ ದೇವರಾಜ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭವಾಗಿಲ್ಲ. ಆದರೆ ವಿಜಯ್ ಸೂರ್ಯ ಹುಟ್ಟುಹಬ್ಬಕ್ಕಾಗಿ ಚಿತ್ರತಂಡ ಟೀಸರ್ ಮಾತ್ರ ಶೂಟಿಂಗ್ ಮಾಡಿ 2 ದಿನಗಳ ಹಿಂದೆ ಬಿಡುಗಡೆ ಮಾಡಿದೆ.

ಆಧುನಿಕ ಅಲೋಪತಿಕ್​​​​​​​ ವೈದ್ಯಕೀಯ ಪದ್ಧತಿಯಿಂದ ಪ್ರಾಚೀನ ಆಯುರ್ವೇದ ಚಿಕಿತ್ಸೆ ಕುಂಠಿತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಚಿತ್ರದಲ್ಲಿ ಹೋರಾಟದ ಕಥೆ ಇದೆ. ಈ ಟೀಸರ್ ಮೊದಲ ದೃಶ್ಯದಲ್ಲಿ ನಾಯಕ ವಿಜಯ್ ಸೂರ್ಯ, ಡಾಕ್ಟರ್ ಒಬ್ಬರನ್ನು ಹೊತ್ತುತಂದು ಆತನ ಮೇಲೆ ಮೆಡಿಸನ್ ಹಾಗೂ ಹಣದ ಕಟ್ಟನ್ನು ಎಸೆದು ಬೆಂಕಿ ಹಚ್ಚುವ ದೃಶ್ಯವನ್ನು ಕಾಣಬಹುದು. ಚಿತ್ರದಲ್ಲಿ ಲವ್​​​​​ ವಿಚಾರ ಕಡಿಮೆ ಇದೆ. ಆದರೆ ಅಪ್ಪ-ಮಗನ ಅನುಬಂಧದ ದೃಶ್ಯಗಳಿವೆ .

Veeraputra movie
'ವೀರಪುತ್ರ' ನಿರ್ಮಾಪಕ ಗುರು ಸಿ. ಬಂಡಿ

'ಸಪ್ಲಿಮೆಂಟರಿ', 'ಧೀರ ಸಾಮ್ರಾಟ್' ಚಿತ್ರಗಳ ನಿರ್ಮಾಪಕ ಗುರು ಸಿ. ಬಂಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರೆಡೂ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ರಾಕೇಶ್, 'ವೀರಪುತ್ರ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಅರಸ್ ಸಂಕಲನ, ಸಾಗರ್ ನೃತ್ಯ ಇದೆ. ರಾಘವ್ ಸುಭಾಷ್ 5 ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ. ಹಿರಿಯ ನಿರ್ದೇಶಕ ಎಸ್​​​​.ಕೆ. ಭಗವಾನ್ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ. ರಥಾವರ, ತಾರಕಾಸುರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಟೀಸರ್​​ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.