ETV Bharat / sitara

'ಬಿಲ್​​​ಗೇಟ್ಸ್' ಟ್ರೇಲರ್ ಬಿಡುಗಡೆ...ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಯಮಲೋಕ..! - 3 ಕೋಟಿ ರೂಪಾಯಿ ಬಜೆಟ್​​ನಲ್ಲಿ ಬಿಲ್​​ಗೇಟ್ಸ್ ನಿರ್ಮಾಣ

ಸಂಪೂರ್ಣ ಯಮಲೋಕದ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ ಪ್ರೇಕ್ಷಕರು ನೀಡಿದ ದುಡ್ಡಿಗೆ ಖಂಡಿತ ಮೋಸವಾಗುವುದಿಲ್ಲ ಎಂದು ಹೇಳಿದೆ. ಚಿತ್ರದಲ್ಲಿ ಚಿಕ್ಕಣ್ಣ ಯಮನ ಪಾತ್ರ ಮಾಡಿದರೆ ಶಿಶಿರ್ ಶಾಸ್ತ್ರಿ ಯಮನ ಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷರ ರೆಡ್ಡಿ ಹಾಗೂ ರಶ್ಮಿತಾ ರೋಜ ಇಬ್ಬರು ನಾಯಕಿಯರು.

Bill Gates
'ಬಿಲ್​​​ಗೇಟ್ಸ್'
author img

By

Published : Feb 3, 2020, 6:34 PM IST

ಟೈಟಲ್​​​ನಿಂದಲೇ ಸ್ಯಾಂಡಲ್​​ವುಡ್​​​ನಲ್ಲಿ ಸುದ್ದಿಯಲ್ಲಿರುವ ಕಾಮಿಡಿ ಕಿಂಗ್ ಚಿಕ್ಕಣ್ಣ ಅಭಿನಯದ 'ಬಿಲ್​​​ಗೇಟ್ಸ್​' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಕಿಂಗ್ ಚಿಕ್ಕಣ್ಣ ಯಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ ಜೊತೆ ಮತ್ತೊಬ್ಬ ನಟ ಶಿಶಿರ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಬಿಲ್​​​ಗೇಟ್ಸ್' ಟ್ರೇಲರ್ ಬಿಡುಗಡೆ ಸಮಾರಂಭ

ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಹಾಸ್ಯ ನಟ ಚಿಕ್ಕಣ್ಣ ಕಾರಣಾಂತರಗಳಿಂದ ಹಾಜರಾಗಿರಲಿಲ್ಲ. ಶಿಶಿರ್ ಶಾಸ್ತ್ರಿ, ರಶ್ಮಿತಾ ರೋಜ, ನಿರ್ದೇಶಕ ಶ್ರೀನಿವಾಸ್​​​​. ಸಿ, ಹದಿನೈದು ಮಂದಿ ನಿರ್ಮಾಪಕರಲ್ಲಿ ಒಬ್ಬರಾಗಿರುವ ವಸಂತ್ ಕುಮಾರ್, ಹಿರಿಯ ನಟ ವಿ. ಮನೋಹರ್, ಯತಿರಾಜ್, ಕ್ಯಾಮರಾಮ್ಯಾನ್ ರಾಕೇಶ್ ಸೇರಿದಂತೆ ಇಡೀ ಬಿಲ್ ಗೇಟ್ಸ್ ತಂಡ ಹಾಜರಿತ್ತು. ಶ್ರೀನಿವಾಸ್ ನಿರ್ದೇಶನ‌ ಮಾಡಿರುವ ಬಿಲ್​​ಗೇಟ್ಸ್​​​​​​​​​​​​​​​, ಔಟ್ ಅಂಡ್ ಔಟ್ ಕಾಮಿಡಿ ಥ್ರಿಲ್ಲರ್ ಸಿನಿಮಾ. ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಯಾಂಟಸಿ ಶೈಲಿಯಲ್ಲಿ ಯಮಲೋಕವನ್ನು ಸೃಷ್ಠಿಸಿರುವುದು ಚಿತ್ರದ ಹೈಲೈಟ್ಸ್​​ ಎನ್ನಬಹುದು. ತಾವು ಬಿಲ್​​​​ಗೇಟ್ಸ್​​ನಂತೆ ಹಣ ಸಂಪಾದಿಸಬೇಕು ಎಂಬ ಆಸೆಯಿಂದ ಇಬ್ಬರು ಯುವಕರು ಹಳ್ಳಿಯಿಂದ ನಗರಕ್ಕೆ ಬರುತ್ತಾರೆ. ನಂತರ ಅವರ ಜೀವನದಲ್ಲಿ ಏನು ನಡೆಯಲಿದೆ ಎಂಬುದು ಚಿತ್ರದ ಕಥೆ.

  • " class="align-text-top noRightClick twitterSection" data="">

ಸಂಪೂರ್ಣ ಯಮಲೋಕದ ಟ್ರೇಲರ್ ಬಿಡುಗಡೆ ಮಾಡಿರುವ ಚಿತ್ರತಂಡ ಪ್ರೇಕ್ಷಕರು ನೀಡಿದ ದುಡ್ಡಿಗೆ ಖಂಡಿತ ಮೋಸವಾಗುವುದಿಲ್ಲ ಎಂದು ಹೇಳಿದೆ. ಚಿತ್ರದಲ್ಲಿ ಚಿಕ್ಕಣ್ಣ ಯಮನ ಪಾತ್ರ ಮಾಡಿದರೆ ಶಿಶಿರ್ ಶಾಸ್ತ್ರಿ ಯಮನ ಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷರ ರೆಡ್ಡಿ ಹಾಗೂ ರಶ್ಮಿತಾ ರೋಜ ಇಬ್ಬರು ನಾಯಕಿಯರು. ಇವರೊಂದಿಗೆ ವಿ. ಮನೋಹರ್, ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜರ್ನಾರ್ಧನ್, ವಿ. ಮನೋಹರ್ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಚಿತ್ರಕ್ಕೆ ರಾಕೇಶ್​​​​​. ಸಿ ಕ್ಯಾಮರಾ ವರ್ಕ್ ಇದ್ದು, ನೋಬಿನ್‌ ಪೌಲ್​​​ ಸಂಗೀತವಿದೆ. ಕೆಜಿಎಫ್ ಕಲಾ ನಿರ್ದೇಶಕ ಶಿವಕುಮಾರ್ ಬಹಳ ಚೆನ್ನಾಗಿ ಯಮಲೋಕದ ಸೆಟ್​​ ಡಿಸೈನ್ ಮಾಡಿದ್ದಾರೆ. 15 ಮಂದಿ ನಿರ್ಮಾಪಕರು ಸೇರಿ ಸುಮಾರು ಮೂರುವರೆ ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.