ಕೂತೂಹಲದಿಂದ ಕಾಯುತ್ತ ಬಿಗ್ ಬಾಸ್ ಸೀಸನ್ 7 ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ.
ಕಿರುತೇರಿಯಲ್ಲಿ ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನರಂಜನೆ ಕಾರ್ಯಕ್ರಮಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಭಿಮಾನಿಯೊಬ್ಬರು ಟ್ವೀಟ್ ನಲ್ಲಿ ಬಿಗ್ ಬಾಸ್ ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ಅವರು, ಅಕ್ಟೋಬರ್ ಎರಡನೇ ವಾರ ಎಂಬ ಉತ್ತರ ನೀಡಿದ್ದಾರೆ.
-
Oct second week sir... https://t.co/aNhgoFM39I
— Kichcha Sudeepa (@KicchaSudeep) September 7, 2019 " class="align-text-top noRightClick twitterSection" data="
">Oct second week sir... https://t.co/aNhgoFM39I
— Kichcha Sudeepa (@KicchaSudeep) September 7, 2019Oct second week sir... https://t.co/aNhgoFM39I
— Kichcha Sudeepa (@KicchaSudeep) September 7, 2019
ಕಳೆದ ಸೀಸನ್ ನಲ್ಲಿ ಕಲರ್ಸ್ ವಾಹಿನಿಗೆ ಅಂದುಕೊಂಡ ಹಾಗೆ ಟಿಆರ್ ಪಿ ಸಿಗಲಿಲ್ಲ. ಹೀಗಾಗಿ, ಕಲರ್ಸ್ ಸೂಪರ್ ವಾಹಿನಿಯಿಂದ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲೇ ಬಿಗ್ ಬಾಸ್ ಪ್ರಸಾರ ಮಾಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಬಿಡದಿಯ ಬಳಿ ಇರುವ ಇನ್ನೊವೆಟಿವ್ ಫಿಲಂ ಸಿಟಿಯಲ್ಲಿರುವ ಬಿಗ್ ಬಾಸ್ ಮನೆ ನವೀಕರಣ ಮಾಡಲಾಗುತ್ತಿದೆ. ಹಾಗೆಯೇ, ಬಿಗ್ ಬಾಸ್ ಸೀಸನ್ 7 ರ ಪ್ರೊಮೋ ಕೂಡ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುವ ವೇಳೆ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.