ಬಿಗ್‌ಬಾಸ್ ಮನೆಯಲ್ಲಿ ಇದೀಗ ಟಾಸ್ಕ್ಗಳು ಪ್ರಾರಂಭವಾಗಿದ್ದು, ಅಸಲಿ ಆಟ ಶುರುವಾಗಿದೆ. ಮೊದಲ ಟಾಸ್ಕ್ ವೀಕ್ಷಕರಿಗೆ ಮನರಂಜನೆ ನೀಡಿದ್ದಂತೂ ಸತ್ಯ.
ಬಿಗ್‌ಬಾಸ್ ನೀಡಿದ್ದ ಗುಣ ಚೀಲ ಟಾಸ್ಕ್ ಪ್ರಕಾರ, ಸ್ಪರ್ಧಿಗಳು ಚೀಲವೊಂದನ್ನು ನೇತುಹಾಕಿ ಎರಡೂ ಕೈಯಲ್ಲಿ ಹಿಡಿಯಬೇಕು. ಚೀಲದ ಮೇಲೆ ಭಾವುಕ, ಶಕ್ತಿವಂತ, ಪ್ರಾಮಾಣಿಕ, ಬುದ್ಧಿವಂತ ಎಂದು ಬರೆಯಲಾಗಿದೆ. ಅದರಲ್ಲಿ ಬರೆದಿದ್ದ ಅರ್ಥವನ್ನು ಸ್ಪರ್ಧಿಗಳು ಸಾಬೀತು ಪಡಿಸಬೇಕು.
ಕುರಿ ಪ್ರತಾಪ್ ಹಿಡಿದಿದ್ದ ಚೀಲದ ಮೇಲೆ ಪ್ರಾಮಾಣಿಕ ಎಂದು ಬರೆದಿತ್ತು. ಈ ಬಗ್ಗೆ ಜೈ ಜಗದೀಶ್ ನೀವು ಹೇಗೆ ಪ್ರಾಮಾಣಿಕ ಎಂದು ಕೇಳಿದರೆ? ರವಿ ಬೆಳಗೆರೆ ನೀನು ಪ್ರಾಮಾಣಿಕ ಅಲ್ಲ ಅಂತ ಈ ಕ್ಷಣದಲ್ಲೇ ನಿರೂಪಿಸುತ್ತೇನೆ ಎಂದರು. ಬಾತ್ ರೂಮ್ ಬಳಿ ಅರ್ಧ ಸೇದಿ ಇಟ್ಟಿದ್ದ ನನ್ನ ಸಿಗರೇಟ್ ನೀನು ಸೇದಲಿಲ್ಲವೇ? ನೀನೇಗೆ ಪ್ರಾಮಾಣಿಕ ಆಗುತ್ತೀಯ? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಕುರಿ, ಸಿಗರೇಟ್ ನಾನು ಸೇದಲಿಲ್ಲ ಎಂದು ಹೇಳಿದರು. ಹಾಗಾಗಿ ಅವರು ತಾನು ಪ್ರಾಮಾಣಿಕ ಎಂಬುದನ್ನು ನಿರೂಪಿಸಿಕೊಳ್ಳುವಲ್ಲಿ ಸೋತರು.
ಪ್ರಿಯಾಂಕಾ ಶಕ್ತಿವಂತ ಎಂದು ಬರೆದಿದ್ದ ಚೀಲ ಹಿಡಿದಿದ್ದರು. ಜೈ ಜಗದೀಶ್ ನೀವು ಹೇಗೆ ಶಕ್ತಿವಂತರು ಎಂಬುದನ್ನು ತಿಳಿಸಿ ಎಂದರು. ನಾನು ಹೆಣ್ಣಾಗಿ ಹುಟ್ಟಿರುವುದೇ ಒಂದು ಶಕ್ತಿ ಎಂದರು. ಬಳಿಕ ತಾನು ಮೆಂಟಲಿ ಸ್ಟ್ರಾಂಗ್ ಎಂದೂ ಹೇಳಿದರು. ಅಂತಹ ಸಂದರ್ಭ ಬಂದರೆ ನನ್ನ ಬಾಯ್‌ಫ್ರೆಂಡನ್ನೂ ಸಹ ಬಿಡುತ್ತೇನೆ ಎಂದರು.
ಭಾವುಕ ಚೀಲವಿದ್ದ ನಟ ಹರೀಶ್ ರಾಜ್‌ಗೆ ನೀವು ಒಂದು ಸಲ ಥಿಯೇಟರ್ ಏರಿದ್ರಿ, ಅದು ಭಾವುಕರಾಗಿ ಏರಿದ್ದೇ ಎಂದು ರಾಜು ತಾಳಿಕೋಟೆ ಕೇಳಿದರು. ಆಗ ನಾನು ಕೋಪದಲ್ಲಿ ಆ ರೀತಿ ಮಾಡಿದ್ದೆ. ಕೋಪದಲ್ಲಿ ನಮ್ಮ ಮೂಗನ್ನು ನಾವೇ ಕೊಯ್ದುಕೊಳ್ತೀವಿ ಅಲ್ವಾ ಹಾಗೆ ಎಂದು ವಿವರ ನೀಡಿದರು.
-
ಖುಷಿಯ ಹರಟೆಗಳಾಯ್ತು, ಈಗ ಚುಚ್ಚು ಮಾತುಗಳು ಹೆಚ್ಚಾಗ್ತಿದೆ.. ಅಸಲಿ ಆಟ ಶುರುವಾಗ್ತಿದೆ
— Colors Kannada (@ColorsKannada) October 16, 2019 " class="align-text-top noRightClick twitterSection" data="
ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/rPyuTMc1Iv
">ಖುಷಿಯ ಹರಟೆಗಳಾಯ್ತು, ಈಗ ಚುಚ್ಚು ಮಾತುಗಳು ಹೆಚ್ಚಾಗ್ತಿದೆ.. ಅಸಲಿ ಆಟ ಶುರುವಾಗ್ತಿದೆ
— Colors Kannada (@ColorsKannada) October 16, 2019
ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/rPyuTMc1Ivಖುಷಿಯ ಹರಟೆಗಳಾಯ್ತು, ಈಗ ಚುಚ್ಚು ಮಾತುಗಳು ಹೆಚ್ಚಾಗ್ತಿದೆ.. ಅಸಲಿ ಆಟ ಶುರುವಾಗ್ತಿದೆ
— Colors Kannada (@ColorsKannada) October 16, 2019
ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/rPyuTMc1Iv
'ಭಾವುಕ'ರಾದ ಹರೀಶ್
ಬಿಗ್ ಬಾಸ್ ನೀಡಿದ್ದ ಗುಣಶೀಲ ಟಾಸ್ಕ್ ನಲ್ಲಿ ಹರೀಶ್ ರಾಜ್ ಅವರಿಗೆ ಭಾವುಕ ಚೀಲವನ್ನು ನೀಡಲಾಗಿತ್ತು. ಸಂದರ್ಶನ ಸಮಿತಿ ಸದಸ್ಯರು ನೀವು ಎಷ್ಟು ಭಾವುಕರು ಎಂದು ಕೇಳಿದಾಗ ಹರೀಶ್ ರಾಜ್ ಉತ್ತರಿಸಿ, ನನ್ನ ಒಂಬತ್ತನೇ ವಯಸ್ಸಿನಲ್ಲಿ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಮೂವರು ಅಕ್ಕಂದಿರು, ನಾನು ಒಬ್ಬನೇ ಮಗ, ನನ್ನ ತಾಯಿ ನನಗೆಂದಿಗೂ ಕಣ್ಣೀರು ಹಾಕಲು ಬಿಟ್ಟಿಲ್ಲ. ಒಮ್ಮೊಮ್ಮೆ ದೇವರನ್ನೇ ಕೇಳುತ್ತೇನೆ ನಮ್ಮನ್ನು ಬಿಟ್ಟು ಹೋದವರು ಎಲ್ಲಿಗೆ ಹೋಗುತ್ತಾರೆ ಎಂದು. ಇದನ್ನು ಹೇಳುತ್ತಾ ಹರೀಶ್ ರಾಜ್ ಕಣ್ಣೀರು ಹಾಕಿದ್ರು.