ETV Bharat / sitara

ಹಣವಿಲ್ಲದೆ ಓದು ನಿಲ್ಲಿಸಿದ ಹುಡುಗಿಗೆ ಒಳ್ಳೆ ಹುಡುಗ ಪ್ರಥಮ್​ ನೆರವು

author img

By

Published : May 8, 2019, 9:12 PM IST

ಆರ್ಥಿಕ ತೊಂದರೆ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಲು ಹೊರಟಿದ್ದ ವಿದ್ಯಾರ್ಥಿನಿಗೆ ಹಣದ ನೆರವು ನೀಡುವ ಮೂಲಕ ಬಿಗ್​​​ಬಾಸ್ ಪ್ರಥಮ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪ್ರಥಮ್​

ಆರ್ಥಿಕವಾಗಿ ಬಲವಾಗಿರುವವರೆಲ್ಲ ಇಲ್ಲದವರಿಗೆ ಸಹಾಯ ಮಾಡುವುದಿಲ್ಲ. ಅಂತಹ ಮನಸ್ಸು ಎಲ್ಲರಿಗೂ ಇರುವುದಿಲ್ಲ. ಕೆಲವೇ ಕೆಲವರು ಮಾತ್ರ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಅಭಿಮಾನಿಗಳು ನೀಡಿದ್ದನ್ನು ಅವರಿಗಾಗಿ ಖರ್ಚು ಮಾಡುತ್ತಾರೆ. ಅಂತಹವರಲ್ಲಿ ಬಿಗ್​​ಬಾಸ್ ಖ್ಯಾತಿಯ ಪ್ರಥಮ್ ಕೂಡಾ ಒಬ್ಬರು.

prathampratham
ವಿದ್ಯಾರ್ಥಿನಿ ಕುಟುಂಬದೊಂದಿಗೆ ಪ್ರಥಮ್​​

ಇನ್ನು ಸಾಧಿಸಲು ಛಲ ಇದ್ದವರಿಗೆ ಕೆಲವೊಮ್ಮೆ ಆರ್ಥಿಕ ಸಮಸ್ಯೆ ಹಿಮ್ಮೆಟಿಸಿಬಿಡುತ್ತದೆ. ಆದರೆ ಯಾರಾದರೂ ದಾನಿಗಳು ಅವರ ಬೆನ್ನಿಗೆ ನಿಂತರೆ ಧೈರ್ಯವಾಗಿ ಮುನ್ನುಗ್ಗುತ್ತಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ ಬಡತನದ ಕಾರಣ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೆ ನಿಲ್ಲಿಸುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಪ್ರಥಮ್ ಮೇಘಾಗೆ ಹಣದ ಸಹಾಯ ಮಾಡುವ ಮೂಲಕ ಅವರು ವಿದ್ಯಾಭ್ಯಾಸ ಮುಂದುವರೆಸಲು ಕಾರಣವಾಗಿದ್ದಾರೆ. ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಉತ್ತಮ ಕೆಲಸಕ್ಕೆ ಮುಂದಾಗಿದ್ದಾರೆ.

pratham
ಪ್ರಥಮ್​​​​

ದ್ವಿತೀಯ ಪಿಯುಸಿಯಲ್ಲಿ ಶೇಕಡಾ 91.5 ಅಂಕ ಗಳಿಸಿದ್ದ ಮೇಘಾಗೆ ಹೆತ್ತವರ ಆರ್ಥಿಕ ಸಂಕಷ್ಟವೇ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೆ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯದಲ್ಲಿದ್ದ ಮೇಘಾಳ ವಿದ್ಯಾಭ್ಯಾಸಕ್ಕೆ ಪ್ರಥಮ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಿಗ್​​​​​​​​​​​​​​​​​​​​​​​​​​​​​​​​ಬಾಸ್​​​ನಲ್ಲಿ ಬಂದಿದ್ದ ಐವತ್ತು ಲಕ್ಷ ರೂಪಾಯಿಯನ್ನು ಸಂಪೂರ್ಣ ಸಮಾಜಮುಖಿ ಕಾರ್ಯಗಳಿಗೆ ಬಳಸುವುದಾಗಿ ಹೇಳಿದ್ದ ಪ್ರಥಮ್ ನುಡಿದಂತೆ ನಡೆಯುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ನುಡಿದಂತೆ ನಡೆಯುತ್ತಿರುವ "ನಟಭಯಂಕರ " ಬಿಗ್ ಬಾಸ್ ಪ್ರಥಮ್.ಏನ್ ಮಾಡಿದ್ದಾರೆ.ಗೋತ್ತಾ?

ಸಾಧಕರಿಗೆ ಕೆಲವು ಸಲ ಏನೇ ಅಡ್ಡಿ ಆತಂಕಗಳಿದ್ದರು ಸಹ ಮೆಟ್ಟಿ ನಿಂತು ಸಾಧಿಸಿಯೇ ಬಿಡ್ತಾರೆ.ಇನ್ನೂ ಕೆಲವು ಸಲ ಬಡತನವೇ ಸಾಧನೆಯನ್ನು ತಿಂದು ಬಿಡುತ್ತದೆ.ಅದ್ರೆ ಅಂತಹ ಸಾಧಕರಿಗೆ ಯಾರಾದರು ದಾನಿಗಳು ಬೆನ್ನಿಗೆ ನಿಂತ್ರೆ ಯಾವುದಕ್ಕೂ ಜಗ್ಗದೆ ಮುನ್ನುಗುತ್ತಾರೆ.ಈಗ ಅದೇ ರೀತಿ ಬಡತನದಿಂದ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೇ ನಿಲ್ಲಿಸುವಂತ ಸ್ಥಿತಿಯಲ್ಲಿದ್ದ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ, ಅವರಿಗೆಬಿಗ್ ಬಾಸ್ ಪ್ರಥಮ್ ಆರ್ಥಿಕ ಸಹಾಯ ಮಾಡಿದ್ದಾರೆ.ಅಲ್ಲದೆ ಆ ಬಡ ವಿದ್ಯಾರ್ಥಿಯ ವಿಧ್ಯಾಭ್ಯಾಸದ ಜವಬ್ದಾರಿಯನ್ನು ಹೊತ್ತು ಉತ್ತಮ ಕೆಲಸಕ್ಕೆ ಮುಂದಾಗಿದ್ದಾರೆ. ಬಡತನ ದಲ್ಲೇ ಉತ್ತಮವಾಗಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿಯಲ್ಲಿ 91.5 ಪರ್ಸೆಂಟೇಜು ಅಂಕ ಗಳಿಸಿಕೊಂಡಿದ್ದ ಮೇಘಾಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಬಡತನವೇ ಅಡ್ಡಿಯಾಗಿಬಿಟ್ಟಿತ್ತು.
ಹನೂರಿನ ಬಂಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ 549 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದರೂ ಹೆತ್ತವರ ಆರ್ಥಿಕ ಸಂಕಷ್ಟವೇ ಮೇಘಾಳ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೇ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯದಲ್ಲಿದ್ದ ಮೇಘಾಳ ವಿದ್ಯಾಬ್ಯಾಸಕ್ಕೆ ಬಿಗ್ ಬಾಸ್ ವಿನ್ನರ್ ಪ್ರಥಮ್ ನೆರವು ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ. ಬಿಗ್ ಬಾಸ್ ನಲ್ಲಿ ಬಂದ ಐವತ್ತು ಲಕ್ಷ ರೂಗಳನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವುದಾಗಿ ಹೇಳಿದ್ದ ಪ್ರಥಮ್ ನುಡಿದಂತೆ ನಡೆಯುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.