ಕೊರೊನಾ ಲಕ್ಷಣಗಳಿದ್ದರೆ ಸೆಲ್ಫ್ ಕ್ವಾರಂಟೈನ್ ಆಗಬೇಕು ಎಂಬ ಸಂದೇಶ ನೀಡಿದ್ದ ಕನ್ನಡತಿ ಧಾರಾವಾಹಿ ಇದೀಗ ಆನ್ ಲೈನ್ ಪಾಠದ ಬಗ್ಗೆಯೂ ಜನರಿಗೆ ಮಾಹಿತಿ ನೀಡುತ್ತಿದೆ.
ಸದಾ ಕನ್ನಡ ಪಾಠ ಮಾಡುತ್ತಾ, ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜನಪ್ರಿಯತೆ ಪಡೆದಿರುವ ಕನ್ನಡತಿ ಧಾರಾವಾಹಿ ಇತ್ತೀಚೆಗೆ ಕೊರೊನಾ ವೈರಸ್ ಬಗ್ಗೆಯೂ ವೀಕ್ಷಕರಲ್ಲಿ ಜಾಗೃತಿ ಮೂಡಿಸಿದೆ. ಸದ್ಯ ಆನ್ ಲೈನ್ ತರಗತಿ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ.
ಕೊರೊನಾ ತಂದಿಟ್ಟ ಸಂಕಷ್ಟದಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿದ್ದು, ಇಂತಹ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಧಾರವಾಹಿ ಮಾಡುತ್ತಿದೆ. ಕನ್ನಡತಿ ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಭುವಿ ಸದ್ಯ ಕನ್ನಡ ಪ್ರಾಧ್ಯಾಪಕಿಯಾಗಿ ಧಾರವಾಹಿ ಪ್ರಿಯರ ಮನಗೆದ್ದಿದ್ದಾಳೆ.
ಕೊರೊನಾ ಕಾರಣ ಆನ್ ಲೈನ್ ನಲ್ಲಿಯೇ ಬೋಧಿಸುವಂತೆ ಶಾಲಾ ಆಡಳಿತ ಮಂಡಳಿ ತಿಳಿಸಿದ್ದು, ಇದಕ್ಕೆ ನಾಯಕ ಹರ್ಷನ ಸಹಾಯ ಪಡೆಯುತ್ತಾಳೆ. ನಾಯಕ ತನ್ನ ಲ್ಯಾಪ್‌ಟಾಪ್ ಕೊಡುವುದರ ಜೊತೆಗೆ ತಾನೂ ಆನ್ ಲೈನ್ ಕ್ಲಾಸ್ ನಲ್ಲಿ ಕುಳಿತುಕೊಳ್ಳುತ್ತಾನೆ. ಒಟ್ಟಿನಲ್ಲಿ ಕೊರೊನಾ ಜಾಗೃತಿಯ ನಂತರ ಆನ್ ಲೈನ್ ಪಾಠದ ಬಗ್ಗೆ ಕನ್ನಡತಿಯಲ್ಲಿ ಪ್ರಸ್ತಾಪ ಬಂದಿರುವುದು ವೀಕ್ಷಕರ ಮನದಣಿಸಿದೆ.