ETV Bharat / sitara

ಬಿಗ್ ಬಾಸ್​ಗೆ 'NO' ಅಂದ್ರು ಭೂಮಿಕಾ ಚಾವ್ಲಾ: ಕಾರಣ ಇಲ್ಲಿದೆ - ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ನ 15ನೇ ಸೀಸನ್

ಹಿಂದಿಯ ಬಿಗ್ ಬಾಸ್​ನ 15ನೇ ಸೀಸನ್​ಗೆ ದಿನಗಣನೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಊಹಾಪೋಹ ಈಗಾಗಲೇ ಶುರುವಾಗಿದ್ದು, ನಟಿ ಭೂಮಿಕಾ ಚಾವ್ಲಾ ಹೆಸರು ಮೊದಲಿಗಿದೆ. ಆದರೆ ತಾನು ಭಾಗವಹಿಸುತ್ತಿಲ್ಲ ಎಂದು ನಟಿ ವಿಚಾರಕ್ಕೆ ತೆರೆ ಎಳೆದಿದ್ಧಾರೆ.

ಭೂಮಿಕಾ ಚಾವ್ಲಾ
ಭೂಮಿಕಾ ಚಾವ್ಲಾ
author img

By

Published : Jun 9, 2021, 2:20 PM IST

ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ನ 15ನೇ ಸೀಸನ್​ಗೆ ದಿನಗಣನೆ ಪ್ರಾರಂಭವಾಗಿದೆ. ಕಳೆದ ವರ್ಷ ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ ಬಿಗ್ ಬಾಸ್ ಶುರುವಾಗಿತ್ತು. ಈ ವರ್ಷ ಸಹ ದೇಶದಲ್ಲಿ ಅನ್ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಮುಂದಿನ ತಿಂಗಳಿನಿಂದ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಮಧ್ಯೆ, ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಊಹಾಪೋಹ ಈಗಾಗಲೇ ಶುರುವಾಗಿದ್ದು, ಹಲವು ನಟ-ನಟಿಯರ ಹೆಸರುಗಳು ಕೇಳಿ ಬರುತ್ತಿವೆ. ಈ ಪೈಕಿ, ನಟಿ ಭೂಮಿಕಾ ಚಾವ್ಲಾ ಹೆಸರು ಮೊದಲಿಗಿದ್ದು, ಈ ಬಾರಿ ಅವರು ಪ್ರಮುಖ ಸ್ಪರ್ಧಿಯಾಗಿ ಬಿಗ್ ಬಾಸ್​ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಷಯವನ್ನು ಭೂಮಿಕಾ ಚಾವ್ಲಾ ನಿರಾಕರಿಸಿದ್ದು, ಯಾವುದೇ ಕಾರಣಕ್ಕೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಗ್ ಬಾಸ್​ನಲ್ಲಿ ನಾನು ಭಾಗವಹಿಸುತ್ತೇನೆ ಎಂಬ ಸುದ್ದಿ ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ನಿಜ ಹೇಳಬೇಕೆಂದರೆ, ಆರಂಭದ ಮೂರು ಸೀಸನ್​ಗಳಿಗೆ ನನಗೆ ಭಾಗವಹಿಸುವುದಕ್ಕೆ ಆಫರ್ ಬಂದಿತ್ತು. ಆದರೆ, ನಾನು ಒಪ್ಪಿರಲಿಲ್ಲ. ಈಗ ಆಫರ್ ಬಂದಿಲ್ಲ, ಬಂದರೂ ನನಗೆ ಹೋಗುವುದಕ್ಕೆ ಇಷ್ಟ ಇಲ್ಲ. ಏಕೆಂದರೆ, ನನಗೆ 24x7 ಕ್ಯಾಮೆರಾಗಳ ಎದುರು ಕಾಣಿಸಿಕೊಳ್ಳುವುದಕ್ಕೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಬಿಗ್ ಬಾಸ್​ಗೆ ಹೋಗುತ್ತಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಭೂಮಿಕಾ ಚಾವ್ಲಾ ಕನ್ನಡದಲ್ಲಿ ಗಾಡ್​ಫಾದರ್ ಮತ್ತು ಲವ್ ಯೂ ಆಲಿಯಾ ಚಿತ್ರಗಳಲ್ಲಿ ಅಭಿನಯಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.