ಮಂಜು ಮಾಂಡವ್ಯ ನಿರ್ದೇಶನದ ಚಿಕ್ಕಣ್ಣ ಅಭಿನಯದಲ್ಲಿ ಬರ್ತಿರುವ ಶ್ರೀ ಭರತ ಬಾಹುಬಲಿ ಸಿನಿಮಾಕ್ಕೆ ಕಂಟಕ ಎದುರಾಗಿದೆ. ಈ ಸಿನಿಮಾದ ಟ್ರೇಲರ್ನಲ್ಲಿ ಭಗವಾನ್ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಹಾಗೂ ಬಾಹುಬಲಿಯ ಬೆಟ್ಟವನ್ನ ತೋರಿಸಿದ್ದಾರೆ. ಅದರ ಜತೆಗೆ ಧೂಮಪಾನ ಮಾಡುವ ದೃಶ್ಯಗಳನ್ನ ತೋರಿಸಿದ್ದಾರೆ. ಸಿನಿಮಾದಲ್ಲಿ ಗೊಮ್ಮಟೇಶ್ವರನನ್ನ ಬಿಂಬಿಸುವ ಅಗತ್ಯ ಇದೆಯಾ? ಎಂದು ಜೈನ ಸಮುದಾಯ ಪ್ರಶ್ನಿಸಿದೆ. ಅಲ್ಲದೆ ಚಿತ್ರದ ಟೈಟಲ್ ಬದಲಿಸುವಂತೆ ಜೈನ್ ಅಸೋಸಿಯೇಷನ್ ಚಿತ್ರ ತಂಡದ ವಿರುದ್ಧ ವಿರೋಧ ವ್ಯಕ್ತಪಡಿಸಿದೆ.
![Bhartha Bhahubali movie contravarcy](https://etvbharatimages.akamaized.net/etvbharat/prod-images/ka-bng-2-bhartha-bhahubali-contravarcy-ka10012_09012020133206_0901f_1578556926_817.jpg)
![Bhartha Bhahubali movie contravarcy](https://etvbharatimages.akamaized.net/etvbharat/prod-images/ka-bng-2-bhartha-bhahubali-contravarcy-ka10012_09012020133206_0901f_1578556926_1026.jpg)
ಟೈಟಲ್ ಕೈಬಿಡುವಂತೆ ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಚಿತ್ರದ ಟೈಟಲ್ ಬದಲಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಜೈನ್ ಅಸೋಸಿಯೇಷನ್ ಹೇಳಿದೆ. ಇನ್ನು ಶ್ರೀ ಭರತ ಬಾಹುಬಲಿ ಸಿನಿಮಾ ಜನವರಿ 17 ರಂದು ಬಿಡುಗಡೆಯಾಗುತ್ತಿದೆ.
- " class="align-text-top noRightClick twitterSection" data="">