ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ 'ಭರಾಟೆ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಮುರಳಿ ಇಮೇಜ್ಗೆ ತಕ್ಕಂತೆ ಚೇತನ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ರಾಜಸ್ಥಾನ, ಹೈದರಾಬಾದ್, ಮಂಡ್ಯ ಹಾಗೂ ಇನ್ನಿತರ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ಜರುಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಜರುಗುತ್ತಿದೆ. ಸಿನಿಮಾದಲ್ಲಿ 9 ಮಂದಿ ವಿಲನ್ಗಳು ಮುರಳಿ ಎದುರು ನಟಿಸಿದ್ದಾರೆ. ಆರ್ಮುಗಂ ರವಿಶಂಕರ್ ಹಾಗೂ ಸಹೋದರ ಅಯ್ಯಪ್ಪ ಮುರಳಿ ಜೊತೆ ಕಾದಾಡುವ ದೃಶ್ಯವನ್ನು ನಿರ್ದೇಶಕ ಚೇತನ್ ಕುಮಾರ್ ಚಿತ್ರೀಕರಿಸುತ್ತಿದ್ದಾರೆ.
ಕೆಜಿಎಫ್ ಚಿತ್ರದಲ್ಲಿ ಪ್ರಮುಖ ವಿಲನ್ ಆಗಿ ನಟಿಸಿದ್ದ ಅಯ್ಯಪ್ಪ 'ಭರಾಟೆ' ಸಿನಿಮಾದಲ್ಲೂ ಉದ್ದವಾದ ಕೂದಲು ಬಿಟ್ಟು ಅಬ್ಬರಿಸಿದ್ದಾರೆ. ನಿರ್ಮಾಪಕ ಸುಪ್ರೀತ್ ಈ ಸಿನಿಮಾದ ನಿರ್ಮಾಪಕರು. ಶ್ರೀಮುರಳಿಯೊಂದಿಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ.