ETV Bharat / sitara

Bhajarangi 2 Trailer: 'ಭಜರಂಗಿ' ಮೋಡಿಗೆ ಬೋಲ್ಡ್​ ಆದ ಶಿವಣ್ಣನ ಫ್ಯಾನ್ಸ್, ದುಪ್ಪಟ್ಟಾಯ್ತು ಸಿನಿಪ್ರಿಯರ ನಿರೀಕ್ಷೆ - Bhajarangi 2 Trailer

ಮಾಸ್ ಎಲಿಮೆಂಟ್ಸ್​ನಿಂದ ಕೂಡಿರುವ ಈ ಟ್ರೇಲರ್​ನಲ್ಲಿ ಶಿವರಾಜಕುಮಾರ್ ಎಂಟ್ರಿಯಿಂದ ಹಿಡಿದು ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು ನೋಡುಗರನ್ನು ಇಂಪ್ರೆಸ್ ಮಾಡುತ್ತಿವೆ. ಭಜರಂಗಿ ಲೋಕಿ, ಭಾವನಾ ಮೆನನ್, ಶೃತಿ ಕ್ಯಾರೆಕ್ಟರ್​ಗಳು ಇಂಟ್ರಸ್ಟಿಂಗ್ ಆಗಿವೆ. ಡೈಲಾಗ್ ಇಲ್ಲದೇ ಇರುವ ಭಜರಂಗಿ-2 ಚಿತ್ರದ ಟ್ರೇಲರ್ ಇದಾಗಿದೆ..

Bhajarangi 2 Trailer release
ಭಜರಂಗಿ 2 ಚಿತ್ರದ ಟ್ರೇಲರ್
author img

By

Published : Oct 20, 2021, 8:38 PM IST

2013ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ ಭಜರಂಗಿ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ್​ನಲ್ಲಿ ಬಂದ ಸೂಪರ್ ಹಿಟ್ ಚಿತ್ರ. ಈ ಚಿತ್ರದ ಸಿಕ್ವೇಲ್ ಆಗಿ ಬರುತ್ತಿರುವ ಸಿನಿಮಾ ಭಜರಂಗಿ 2. ಟೀಸರ್ ಹಾಗೂ ಹಾಡುಗಳಿಂದ ಕನ್ನಡ ಚಿತ್ರರಂಗ ಅಲ್ಲದೇ ಸೌತ್​​ ಸಿನಿಮಾ ಇಂಡಸ್ಟ್ರಿಯಲ್ಲೂ ಹವಾ ಸೃಷ್ಟಿಸಿರೋದು ಭಜರಂಗಿ 2.

ಚಿತ್ರದ ಆಫಿಷಿಯಲ್ ಟ್ರೇಲರ್ ಅನಾವರಣ ಆಗಿದೆ. ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಎರಡು ಶೇಡ್​ನಲ್ಲಿ ಕಾಣಿಸಿರುವ ಭಜರಂಗಿ-2 ಚಿತ್ರದ ಟ್ರೇಲರ್, ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹೆಚ್ಚಿಸಿದೆ.

ಮಾಸ್ ಎಲಿಮೆಂಟ್ಸ್​ನಿಂದ ಕೂಡಿರುವ ಈ ಟ್ರೇಲರ್​ನಲ್ಲಿ ಶಿವರಾಜಕುಮಾರ್ ಎಂಟ್ರಿಯಿಂದ ಹಿಡಿದು ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು ನೋಡುಗರನ್ನು ಇಂಪ್ರೆಸ್ ಮಾಡುತ್ತಿವೆ. ಭಜರಂಗಿ ಲೋಕಿ, ಭಾವನಾ ಮೆನನ್, ಶೃತಿ ಕ್ಯಾರೆಕ್ಟರ್​ಗಳು ಇಂಟ್ರಸ್ಟಿಂಗ್ ಆಗಿವೆ. ಡೈಲಾಗ್ ಇಲ್ಲದೇ ಇರುವ ಭಜರಂಗಿ-2 ಚಿತ್ರದ ಟ್ರೇಲರ್ ಇದಾಗಿದೆ.

ಛಾಯಾಗ್ರಾಹಕ ಸ್ವಾಮಿ ಜೆ.ಗೌಡ ಕೈಚಳಕ ಬೊಂಬಾಟ್ ಆಗಿದೆ. ಇದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜೊತೆಗೆ ಕಲಾ ನಿರ್ದೇಶಕ ರವಿ ಸಂತೆಹಕ್ಲು ಹಾಕಿರುವ ಒಂದೊಂದು ಸೆಟ್ಟುಗಳು ಅದ್ಭುತವಾಗಿವೆ.

ಸಾಹಸ ನಿರ್ದೇಶಕ ರವಿವರ್ಮ ಹಾಗೂ ವಿಕ್ರಮ್ ಮೋರೆ ಆ್ಯಕ್ಷನ್ ಸಿಕ್ವೇನ್ಸ್​ಗಳು ಪರಭಾಷೆಯ ಸಿನಿಮಾಗಳಿಗೆ ಪೈಪೋಟಿ ಕೊಡುವ ಹಾಗೆ ಇವೆ. ಶಿವರಾಜಕುಮಾರ್ ಆ ಎನರ್ಜಿ ನೋಡಿ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.

ನಿರ್ದೇಶಕ ಎ.ಹರ್ಷ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೆಂದ್ರ ಭಜರಂಗಿ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಇದೇ ಅಕ್ಟೋಬರ್ 29ಕ್ಕೆ 300ಕ್ಕೂ ಹೆಚ್ಚು ಚಿತ್ರಮಂದಿರ ಸೇರಿದಂತೆ ವಿಶ್ವದಾದ್ಯಂತ ಭಜರಂಗಿ-2 ಸಿನಿಮಾ ಬಿಡುಗಡೆ ಆಗುತ್ತಿದೆ.

ಓದಿ: ನೆಟ್ ಫ್ಲಿಕ್ಸ್ ನಲ್ಲಿ 'ಧಮಾಕ' ಚಿತ್ರದ ಟ್ರೈಲರ್ ಬಿಡುಗಡೆ: ಪ್ರೇಕ್ಷಕರಿಂದ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.