ETV Bharat / sitara

'ಭಜರಂಗಿ-2' ಚಿತ್ರದ ಭಜರೇ ಭಜರೇ ಲಿರಿಕಲ್ ವಿಡಿಯೋ ಬಿಡುಗಡೆ

author img

By

Published : Mar 15, 2021, 7:21 PM IST

ಎ. ಹರ್ಷ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ನಟಿಸಿರುವ 'ಭಜರಂಗಿ-2' ಚಿತ್ರದ ಭಜರೇ ಭಜರೇ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಅಭಿಮಾನಿಗಳು ಹಾಡುಗಳನ್ನು ಬಹಳ ಮೆಚ್ಚಿಕೊಂಡಿದ್ದಾರೆ.

Bhajarangi 2
'ಭಜರಂಗಿ-2'

'ಭಜರಂಗಿ', ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಸಿನಿಮಾ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎರಡು ಶೇಡ್​​​​​​​​​​​​​​​​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯ ಕದ್ದಿದ್ದರು. ಈಗ ಭಜರಂಗಿ ಸಿಕ್ವೇಲ್ ಬರುತ್ತಿದ್ದು ಶಿವರಾಜ್​​ಕುಮಾರ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: 'ಗುರು ಶಿಷ್ಯರು' ಚಿತ್ರಕ್ಕೆ ನಾಯಕಿಯಾಗಿ ಬಂದ್ರಾ ನಿಶ್ವಿಕಾ ನಾಯ್ಡು...?

ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ. ಹರ್ಷ ಕಾಂಬಿನೇಶನ್​​​​ನಲ್ಲಿ ಬರುತ್ತಿರುವ 'ಭಜರಂಗಿ-2' ಬಹುತೇಕ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ‌. ಸದ್ಯ ಭಜರಂಗಿ-2 ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿವೀಲ್ ಆಗಿದೆ‌. ಭಜರೇ ಭಜರೇ ಭಜರಂಗಿ... ಎಂಬ ಹಾಡನ್ನು ಗಾಯಕ ಶಂಕರ್ ಮಹದೇವನ್ ಬಹಳ ಜೋಶ್​​​​​ನಿಂದ ಹಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ 'ಭಜರಂಗಿ -2' ಚಿತ್ರಕ್ಕೆ ಕ್ಯಾಚೀ ಟ್ಯೂನ್​​​​​ಗಳನ್ನು ಹಾಕಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಬಹಳ ವಿಭಿನ್ನವಾದ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಎ. ಹರ್ಷ ನಿರ್ದೇಶನದ ಈ ಸಿನಿಮಾವನ್ನು ಜಯಣ್ಣ ಮತ್ತು ಭೋಗೇಂದ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋನ ಈ ಹೊಸ ಅವತಾರಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.