2019ರಲ್ಲಿ ಬಿಡುಗಡೆಯಾಗಿದ್ದ ಬೆಲ್ ಬಾಟಂ ಸಿನಿಮಾ ಯಶಸ್ಸಿನಿಂದ ಸ್ಫೂರ್ತಿ ಪಡೆದ ಚಿತ್ರತಂಡ ಇದೀಗ ಅದೇ ಚಿತ್ರದ ಸೀಕ್ವೆಲ್ ತಯಾರಿಸುತ್ತಿದೆ. 'ಬೆಲ್ ಬಾಟಂ 2' ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನೆರವೇರಿದೆ.
ಇಂದು ಬನಶಂಕರಿಯ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಮೂಹೂರ್ತ ಪೂಜೆಯ ಮೂಲಕ ಚಿತ್ರೀಕರಣ ಆರಂಭವಾಯಿತು. ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ನಟಿ ಪ್ರಿಯಮಣಿ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.
ಈ ಚಿತ್ರದ ಮೊತ್ತೊಂದು ವಿಶೇಷ ಏನಂದ್ರೆ 'ಬೆಲ್ ಬಾಟಂ-2' ಚಿತ್ರದಲ್ಲಿ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದಲ್ಲಿ ಬಸಣ್ಣಿ ಬಾ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದ ತಾನ್ಯ ಹೋಪ್ ನಟಿಸಲಿದ್ದಾರೆ. ಹಾಗೂ ನಾಯಕಿಯಾಗಿ ನೀರ್ ದೋಸೆ ಬೆಡಗಿ ಹರಿಪ್ರಿಯಾ ಮುಂದುವರೆಯಲಿದ್ದಾರೆ.