ನಟ, ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ಚಿಕ್ಕಮಗಳೂರಿನ ಚೆಲುವೆ ಹರಿಪ್ರಿಯಾ ಅಭಿನಯದ 'ಬೆಲ್ ಬಾಟಂ' ಚಿತ್ರ ಅಮೋಘ ನಾಲ್ಕನೇ ವಾರ ಪ್ರದರ್ಶನ ಕಾಣುತ್ತಿದೆ.
ಚಿತ್ರದಲ್ಲಿ 80ರ ದಶಕದ ರೆಟ್ರೋ ಲುಕ್ನಲ್ಲಿ ರಿಷಭ್-ಹರಿಪ್ರಿಯಾ ಮಿಂಚಿದ್ದಾರೆ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಖತ್ತಾಗಿ ವರ್ಕ್ಔಟ್ ಆಗಿದೆ. ಅದರಲ್ಲೂ ಇವರಿಬ್ಬರ ಕಾಂಬಿನೇಷನ್ನ ಏತಕೆ ಬೊಗಸೆ ತುಂಬಾ ಆಸೆ ನೀಡುವೇ ಸಾಂಗಂತೂ ಎಲ್ಲರ ಮನಸೂರೆಗೊಂಡಿದೆ. ಈ ಹಾಡಿನಲ್ಲಿ ರಿಷಭ್ ಹಾಗೂ ಹರಿಪ್ರಿಯಾ ಕಣ್ಸನ್ನೆಗಳು ಕ್ಲಿಕ್ ಆಗಿವೆ. ಸದ್ಯ ಚಿತ್ರತಂಡ ಈ ಹಾಡಿನ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿದೆ. ರಿಷಭ್ ಮತ್ತು ಹರಿಪ್ರಿಯಾ ಸಖತ್ ತರಲೇಯಾಗಿ,ಲವಲವಿಕೆಯಿಂದ ಶೂಟಿಂಗ್ ಪೂರೈಸಿರುವುದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
#Bell_Bottom
— jayathirtha Jayanna (@jayathirtha77) March 13, 2019 " class="align-text-top noRightClick twitterSection" data="
Making of #YETHAKE Song pic.twitter.com/bBcBcWi4ip
">#Bell_Bottom
— jayathirtha Jayanna (@jayathirtha77) March 13, 2019
Making of #YETHAKE Song pic.twitter.com/bBcBcWi4ip#Bell_Bottom
— jayathirtha Jayanna (@jayathirtha77) March 13, 2019
Making of #YETHAKE Song pic.twitter.com/bBcBcWi4ip
ಅಜನೀಶ್ ಲೋಕನಾಥ್ ಟ್ಯೂನಿಗೆ ವಿಕಟ ಕವಿ ಯೋಗರಾಜ್ ಭಟ್ ಪದಗಳ ಪೋಣಿಸಿದ್ರೆ, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಈ ಹಾಡಿನ ಚಿತ್ರೀಕರಣ ಶಿವಮೊಗದಲ್ಲಿ ನಡೆದಿದೆ.