ಮುಂಬೈ: ಅಕ್ಷಯ್ ಕುಮಾರ್ ಮತ್ತು ವಾನಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಬೇಹುಗಾರಿಕೆ ಥ್ರಿಲ್ಲರ್ ಚಿತ್ರ ಬೆಲ್ ಬಾಟಂ ಆಗಸ್ಟ್‌ನಲ್ಲಿ ಯುಕೆಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ನಿರ್ಮಾಪಕರು ಪ್ರಕಟಿಸಿದ್ದಾರೆ.
ಭಾರತದ ಮರೆತು ಹೋದ 1980ರ ವೀರರ ಕಥೆ ಹೇಳುವ ಬೆಲ್ ಬಾಟಂ ಚಿತ್ರವನ್ನು ರಂಜಿತ್ ಎಂ. ತಿವಾರಿ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೂಢಚಾರಿ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ. ಚಿತ್ರೀಕರಣ ಪ್ರಾರಂಭಿಸುವ ಕುರಿತು ಅಕ್ಷಯ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಉತ್ತಮವಾಗಿ ಏನಾದರು ಮಾಡಬೇಕೆಂದು ನಾವು ಯೋಚಿಸುತ್ತಿದ್ದೇವೆ. ನಾವು ಕೆಲಸಕ್ಕೆ ಮರಳುವ ಸಮಯ, ಮುಂದಿನ ತಿಂಗಳು ಬೆಲ್ ಬಾಟಲ್ ಸೆಟ್ಟೇರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
-
Looking forward to doing what we do best! Time we get back to work! #Bellbottom to go on floors next month @vashubhagnani @vaaniofficial @humasqureshi @LaraDutta @ranjit_tiwari @jackkybhagnani @honeybhagnani @monishaadvani @madhubhojwani @nikkhiladvani @EmmayEntertain @poojafilms pic.twitter.com/QmqTLFtnG3
— Akshay Kumar (@akshaykumar) July 6, 2020 " class="align-text-top noRightClick twitterSection" data="
">Looking forward to doing what we do best! Time we get back to work! #Bellbottom to go on floors next month @vashubhagnani @vaaniofficial @humasqureshi @LaraDutta @ranjit_tiwari @jackkybhagnani @honeybhagnani @monishaadvani @madhubhojwani @nikkhiladvani @EmmayEntertain @poojafilms pic.twitter.com/QmqTLFtnG3
— Akshay Kumar (@akshaykumar) July 6, 2020Looking forward to doing what we do best! Time we get back to work! #Bellbottom to go on floors next month @vashubhagnani @vaaniofficial @humasqureshi @LaraDutta @ranjit_tiwari @jackkybhagnani @honeybhagnani @monishaadvani @madhubhojwani @nikkhiladvani @EmmayEntertain @poojafilms pic.twitter.com/QmqTLFtnG3
— Akshay Kumar (@akshaykumar) July 6, 2020
ದೊರೆತಿರುವ ಮಾಹಿತಿ ಪ್ರಕಾರ, ಹುಮಾ ಖುರೇಷಿ ಮತ್ತು ಲಾರಾ ದತ್ತಾ ಸೇರಿದಂತೆ ಬೆಲ್ ಬಾಟಂ ಚಿತ್ರತಂಡ ಚಿತ್ರೀಕರಣಕ್ಕಾಗಿ ಯುಕೆಗೆ ತೆರಳಲಿದೆ. ವಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಿಶ್ಕಾ ದೇಶ್ಮುಖ್, ಮೋನಿಷಾ ಅಡ್ವಾಣಿ, ಮಧು ಭೋಜ್ವಾನಿ ಮತ್ತು ನಿಖಿಲ್ ಅಡ್ವಾಣಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಸೀಮ್ ಅರೋರಾ ಮತ್ತು ಪರ್ವೀಜ್ ಶೇಖ್ ಚಿತ್ರಕಥೆ ಬರೆದಿರುವ ಈ ಚಿತ್ರವು 2 ಏಪ್ರಿಲ್, 2021ರಂದು ಬಿಡುಗಡೆಯಾಗಲಿದೆ.