ನವಿಲುಗರಿ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿರುವ, ಮಕ್ಕಳೇ ಪ್ರಮಖ ಪಾತ್ರದಲ್ಲಿ ನಟಿಸಲಿರುವ "ಬಾರಿಸು ಕನ್ನಡ ಡಿಂಡಿಮವ" ಚಿತ್ರದ ಪೋಸ್ಟರ್ ಅನ್ನು ಲಕ್ಷ್ಮೀ ಬಾರಮ್ಮಾ ಧಾರವಾಹಿ ಖ್ಯಾತಿಯ ಚಂದು ಗೌಡ ಬಿಡುಗಡೆ ಮಾಡಿದರು.
ನವೀನ್ ಈ ಹಿಂದೆ ‘ಅಭಯ ಹಸ್ತ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಹೊಸ ಕಥೆಯೊಂದಿಗೆ ಹಳೇಯ ಹೆಸರಾಂತ ಕನ್ನಡ ಟೈಟಲ್ ಇಟ್ಟುಕೊಂಡು ಕನ್ನಡ ಭಾಷೆಯ ಉಳಿವಿನ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ’ ಸಿನಿಮಾದಲ್ಲಿ ಬಹುಪಾಲು ಮಕ್ಕಳೇ ನಟಿಸಲಿದ್ದಾರೆ ಎಂದು ನಿರ್ದೇಶಕ ನವೀನ್ ಹೇಳಿದ್ದಾರೆ.
ಇನ್ನು ಈ ಸಿನಿಮಾದಲ್ಲಿ 4 ಹಾಡುಗಳಿದ್ದು, ನವ ಸಂಗೀತ ನಿರ್ದೇಶಕ ಮನುರಾಜ್ ಸಂಗೀತ ನೀಡಲಿದ್ದಾರೆ. ನಿರ್ದೇಶಕ ನವಿಲುಗರಿ ನವೀನ್, ಪಿಬಿ ರಾಜೇಶ್ವರಿ ಸುಂದರಮೂರ್ತಿ ಡಾ. ಕಾಸರಗೋಡು, ಅಶೋಕ್ ಕುಮಾರ್ ಸಾಹಿತ್ಯ ಬರೆಯಲಿದ್ದಾರೆ.
ಈ ಚಿತ್ರವನ್ನು ಅಶ್ವಿಕ ನಿರ್ಮಾಣ ಮಾಡ್ತಿದ್ದು, ಚಿತ್ರದಲ್ಲಿ ಪ್ರೊ. ಡಾ. ದೊಡ್ಡರಂಗೇಗೌಡರು ಮುಖ್ಯ ಭೂಮಿಕೆಯಲ್ಲಿ ಬಣ್ಣಹಚ್ಚಲಿದ್ದಾರೆ. ಈ ಸಿನಿಮಾ ಬಹುತೇಕ ಚಿತ್ರೀಕರಣವನ್ನು ಮೈಸೂರು ಹಾಗೂ ಪಾಂಡವಪುರದ ಭಾಗಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರ ತಂಡವು ನಿರ್ಧಾರ ಮಾಡಲಾಗಿದೆ.