ETV Bharat / sitara

ಏಕಕಾಲದಲ್ಲಿ 2 ಭಾಷೆ, 3 ರಾಜ್ಯಗಳ ಚಿತ್ರಮಂದಿರಗಳಲ್ಲಿ 'ಭಜರಂಗಿ 2' ರಿಲೀಸ್

ನಟ ಶಿವರಾಜ್​ ಕುಮಾರ್​ ಅಭಿನಯದ 'ಭಜರಂಗಿ 2' ಚಿತ್ರವು ಈ ತಿಂಗಳ ಕೊನೆಗೆ ರಾಜ್ಯಾದ್ಯಂತ ಸೇರಿದಂತೆ ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ಭಾಷೆಗೆ ಡಬ್​ ಆಗಿ ಬಿಡುಗಡೆಯಾಗಲಿದೆ.

'Bajrangi 2' film  will be released across 3 states
3 ರಾಜ್ಯಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ 'ಭಜರಂಗಿ 2' ಚಿತ್ರ
author img

By

Published : Oct 19, 2021, 10:59 AM IST

ನಟ ಶಿವರಾಜ್​ಕುಮಾರ್​ ಅಭಿನಯದ 'ಭಜರಂಗಿ 2' ಚಿತ್ರವು ಈ ತಿಂಗಳ ಕೊನೆಗೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಭಜರಂಗಿ 2 ಚಿತ್ರದ ತೆಲುಗು ಡಬ್ಬಿಂಗ್ ಹಕ್ಕುಗಳನ್ನು ನಿರಂಜನ್ ಎನ್ನುವವರು ಪಡೆದಿದ್ದು, ಅವರು ಜೈ ಭಜರಂಗಿ ಹೆಸರಿನಲ್ಲಿ ತೆಲುಗಿಗೆ ಡಬ್ ಮಾಡಿ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ. ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳಿಂದ ಸೇರಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಎಂಬ ಸುದ್ದಿ ಇದೆ.

ಶಿವರಾಜ್​​ಕುಮಾರ್​ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಕೆಲವು ಚಿತ್ರಗಳು ಇಲ್ಲಿ ಬಿಡುಗಡೆಯಾಗಿ ಕೆಲವು ದಿನಗಳ ನಂತರ ತೆಲುಗಿಗೆ ಡಬ್ ಆಗಿ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿವೆ. ಇನ್ನೂ ಕೆಲವು ಚಿತ್ರಗಳು ನೇರವಾಗಿ ಟಿವಿಯಲ್ಲಿ ಪ್ರಸಾರವಾಗಿವೆ. ಆದರೆ, ಭಜರಂಗಿ 2 ಚಿತ್ರ ಏಕಕಾಲದಲ್ಲಿ ಮೂರು ರಾಜ್ಯಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

ಭಜರಂಗಿ 2 ಚಿತ್ರವು ಮೇ ತಿಂಗಳಿನಲ್ಲಿ ಬಿಡುಗಡಯಾಗಬೇಕಿತ್ತು. ಕೋವಿಡ್​ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ಕ್ಕೆ ಮುಂದೂಡಲಾಯಿತು. ಆಗ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕಿಲ್ಲವಾದ ಕಾರಣ, ಈಗ ಅಂದರೆ ಅ. 29ಕ್ಕೆ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕೂ ಮುನ್ನ ನಾಳೆ ಸಂಜೆ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿ ನಾಲ್ವರಿಗೆ ಬರಗೂರು ಪ್ರಶಸ್ತಿ

ಶಿವರಾಜ್​ಕುಮಾರ್​ಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸುತ್ತಿದ್ದಾರೆ. ಮಿಕ್ಕಂತೆ, ಶ್ರುತಿ, ಲೋಕಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿರುವ ಈ ಚಿತ್ರವನ್ನು ಹರ್ಷ ನಿರ್ದೇಶಿಸಿದ್ದು, ಜಯಣ್ಣ ನಿರ್ಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.