ETV Bharat / sitara

ಡಾಲಿ 'ಬಡವ ರಾಸ್ಕಲ್'​ ಬಿಡುಗಡೆ ದಿನಾಂಕ ಘೋಷಣೆ

author img

By

Published : Oct 8, 2021, 9:15 AM IST

'ಬಡವ ರಾಸ್ಕಲ್' ಚಿತ್ರದ 'ಉಡುಪಿ ಹೋಟೆಲ್..' ಎಂಬ ಹಾಡು ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈ ಚಿತ್ರವನ್ನು ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ.

Badava Rascal to release on December 24th
'ಬಡವ ರಾಸ್ಕಲ್'​ ರಿಲೀಸ್ ಡೇಟ್ ಘೋಷಣೆ

ಡಾಲಿ ಧನಂಜಯ್ ಅಭಿನಯದ ಒಂದೊಂದೇ ಚಿತ್ರದ ಬಿಡುಗಡೆ ದಿನಾಂಕಗಳ ಘೋಷಣೆಯಾಗುತ್ತಿವೆ. 'ಸಲಗ' ಮತ್ತು 'ರತ್ನನ್ ಪ್ರಪಂಚ' ನಂತರ, ಇದೀಗ ಧನಂಜಯ್ ಅಭಿನಯ ಮತ್ತು ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಿಡುಗಡೆಯ ದಿನಾಂಕ ಸಹ ಗುರುವಾರ ಗೊತ್ತಾಗಿದ್ದು, ಕ್ರಿಸ್ಮಸ್ ಪ್ರಯುಕ್ತ ಚಿತ್ರವು ಡಿಸೆಂಬರ್ 24ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಸರ್ಕಾರವು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಿತ್ತಾದರೂ, ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಚಿತ್ರಗಳ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಈಗ ಒಂದೊಂದೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, 'ಬಡವ ರಾಸ್ಕಲ್' ಚಿತ್ರದ ಬಿಡುಗಡೆ ಸಹ ಘೋಷಣೆಯಾಗಿದೆ.

ವಿಶೇಷವೆಂದರೆ, ಇದಕ್ಕೂ ಮುನ್ನ ಧನಂಜಯ್ ಅಭಿನಯದ ಇನ್ನೊಂದು ಚಿತ್ರ ಅದೇ ದಿನ ಬರಬೇಕಿತ್ತು. ಅದೇ 'ಪುಷ್ಪ'. ಅಲ್ಲು ಅರ್ಜುನ್ ಅಭಿನಯದ ಈ ತೆಲುಗು ಚಿತ್ರ ಮೊದಲು ಡಿ.24ಕ್ಕೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರವು ಒಂದು ವಾರ ಮುಂಚೆಯೇ, ಅಂದರೆ ಡಿ. 17ಕ್ಕೆ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿ. 24ಕ್ಕೆ ತಮ್ಮ ಚಿತ್ರವನ್ನು ತೆರೆಗೆ ತರುವುದಕ್ಕೆ ಧನಂಜಯ್ ಮುಂದಾಗಿದ್ದಾರೆ.

ಬಡವ ರಾಸ್ಕಲ್ ಚಿತ್ರದ 'ಉಡುಪಿ ಹೋಟೆಲ್..' ಎಂಬ ಹಾಡು ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈ ಚಿತ್ರವನ್ನು ಧನಂಜಯ್, ತಮ್ಮ ಡಾಲಿ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಧನಂಜಯ್, ಅಮೃತಾ ಅಯ್ಯಂಗಾರ್, ನಾಗಭೂಷಣ್, ಗುರುಪ್ರಸಾದ್ ಮುಂತಾದವರು ಅಭಿನಯಿಸಿರುವ ಈ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದರೆ, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: ಸಮಂತಾ - ನಾಗಚೈತನ್ಯ ಡಿವೋರ್ಸ್​​: ಮೊದಲ ಫೋಟೋ ಪೋಸ್ಟ್​ ಮಾಡಿದ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.