ETV Bharat / sitara

ಮೇಷ್ಟ್ರು ಮಗ ದೊಡ್ಡ ಸಾಧನೆ ಮಾಡುತ್ತಿದ್ದಾನೆ : ಮಗನ ಬಗ್ಗೆ ಡಾಲಿ ತಂದೆ ಮೆಚ್ಚುಗೆ

author img

By

Published : Aug 24, 2019, 5:14 PM IST

ಬಡವ ರಾಸ್ಕಲ್ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಗುಜ್ಜರ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಗುರು ಎಂಬುವರು ಈ ಚಿತ್ರದ ನಿರ್ದೇಶಕ. ಅವರಿಗೆ ಇದು ಚೊಚ್ಚಲ ಸಿನಿಮಾ.

badava rascal

ನಟ ಭಯಂಕರ ಡಾಲಿ ಧನಂಜಯ್ ಅವರು ನಟಿಸಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್' ಚಿತ್ರ ಸೆಟ್ಟೇರಿದೆ. ನಿನ್ನೆ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡೆ ಮಾಹಾಕಾಳಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತು.

ನಟ ಹಾಗೂ ಡಾಲಿ ಆಪ್ತ ಸ್ನೇಹಿತ ಕರಿಚಿರತೆ ದುನಿಯಾ ವಿಜಯ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಗೆಳೆಯನ ಚಿತ್ರಕ್ಕೆ ವಿಶ್ ಮಾಡಿದರು. ಅಲ್ಲದೆ ಮಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ ಡಾಲಿ ಧನಂಜಯ್ ಅವರ ತಂದೆ-ತಾಯಿ ಮಗನ ಹೊಸ ಚಿತ್ರಕ್ಕೆ ಶುಭಹಾರೈಸಿದರು. ಈ ವೇಳೆ ಮಗನ ಈ ಸಾಧನೆಗೆ ಹೆಮ್ಮೆ ಪಟ್ಟ ಡಾಲಿ ತಂದೆ, ಒಬ್ಬ ಪ್ರೈಮರಿ ಸ್ಕೂಲ್ ಮೇಷ್ಟ್ರು ಮಗ ಇಂದು ಸಿನಿಮಾ ನಿರ್ಮಾಪಕ ಆಗುತ್ತಿರುವುದು ಖುಷಿ ತಂದಿದೆ. ಬಾಲ್ಯದಲ್ಲಿ ಆತನನ್ನು ಬಡವ ರಾಸ್ಕಲ್ ಎಂದು ಬೈದಿದ್ದು, ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾನೆ ಎಂದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡವ ರಾಸ್ಕಲ್ ಚಿತ್ರದ ಮುಹೂರ್ತ

ಇನ್ನು ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಗುಜ್ಜರ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಗುರು ಎಂಬುವರು ಈ ಚಿತ್ರದ ನಿರ್ದೇಶಕ. ಅವರಿಗೆ ಇದು ಚೊಚ್ಚಲ ಸಿನಿಮಾ.

ಬಡವ ರಾಸ್ಕಲ್ ಚಿತ್ರಕ್ಕೆ ನಾಯಕಿಯಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸುತ್ತಿರುವ ಅಮೃತ ಸೆಲೆಕ್ಟ್ ಆಗಿದ್ದಾರೆ. ಟಗರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದು, ಪ್ರೀತಿಯ ರಾಮನ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

ಬೆಂಗಳೂರಿನ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದ್ದು, ಈ ವರ್ಷದ ಅಂತ್ಯಕ್ಕೆ ಬಡವ ರಾಸ್ಕಲ್​​​ನನ್ನು ತೆರೆಮೇಲೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Intro:ಬೆಂಗಳೂರು: ಇವತ್ತು ನಟ ಭಯಂಕರ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 34ನೇ ವಸಂತಕ್ಕೆ ಕಾಲಿಟ್ಟ ಧನಂಜಯ್ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ‌ ಆಚರಿಸಿಕೊಂಡಿರೋ ಡಾಲಿ ಅವರ ಅಭಿಮಾನಿಗಳಿಗೆ ಸರ್ಪ್ರೈಜ್ ಗಿಫ್ಟ್ ನೀಡಿದ್ದಾರೆ. ಎಸ್ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಡಾಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ . ಅದೇನಪ್ಪಾ ಅಂದರೆ ಧನಂಜಯ್ ಅವರ ಹೊಸಚಿತ್ರ ."ಬಡವ ರಾಸ್ಕಲ್" ಇಂದು ಸೆಟ್ಟೇರುವ ಮೂಲಕ ಡಾಲಿ ಅಭಿಮಾನಿಗಳಿಗೆ ಡಬಲ್ ಧಮಾಕವಾಗಿದೆ.

ನಗರದ ಗವಿಪುರಂ ಗುಟ್ಟಳ್ಳಿ ಯ ಬಂಡೆ ಮಾಕಾಳಮ್ಮ ದೇವಾಲಯದಲ್ಲಿ ನಡೆದ " ಬಡವ ರಾಸ್ಕಲ್" ಚಿತ್ರದ ಮುಹೂರ್ತ ಸಮಾರಂಭಕ್ಕೆ ಕರಿಚಿರತೆ ದುನಿಯಾ ವಿಜಯ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದರು. ಅಲ್ಲದೆ ಚಿತ್ರದ ಮಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ ಡಾಲಿ ಧನಂಜಯ್ ಅವರ ತಂದೆ-ತಾಯಿಗಳು ಮಗನ ಹೊಸ ಚಿತ್ರಕ್ಕೆ ಶುಭಹಾರೈಸಿದರು. ರಿಟೈರ್ಡ್ ಸ್ಕೂಲ್ ಮೇಷ್ಟ್ರು ಡಾಲಿ ಧನಂಜಯ್ ಅವರ ತಂದೆ ನನ್ನ ಮಗ ನನಗೆ ಇಂದ ಬಡವ ರಾಸ್ಕಲ್ ಎಂದು ಬೈಸಿಕೊಂಡಿದ್ದ ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾನೆ ತುಂಬಾ ಖುಷಿಯಾಗುತ್ತೆ ಎಂದು ಮಗನ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Body:ಇನ್ನು ಬಡವ ರಾಸ್ಕಲ್ ಚಿತ್ರವನ್ನು ಡಾಲಿ ಪಿಚ್ಚರ್ಸ್ ಬ್ಯಾನರ್ ಅಡಿ ಗುಜ್ಜರ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮೊದಲ ಬಾರಿಗೆ ಶಂಕರ್ ಗುರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಡವ ರಾಸ್ಕಲ್ ಚಿತ್ರ ನಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳು ಹಾಗೂ ಕ್ಯಾರೆಕ್ಟರ್ ಗಳ ಈ ಚಿತ್ರದಲ್ಲಿ ಪಿಚ್ಚರ್ ಆಗಿದ್ದು ಇದೊಂದು ಪಕ್ಕಾ ಕಮರ್ಷಿಯಲ್ ಮಾಸ್ ಎಂಟರ್ಟೈನ್ಮೆಂಟ್ ಚಿತ್ರ ಎಂದು ನಿರ್ದೇಶಕ ಶಂಕರ್ ಗುರು ಹೇಳಿದರು.

ಅಲ್ಲದೇ ಬಡವ ರಾಸ್ಕಲ್ ಚಿತ್ರಕ್ಕೆ ನಾಯಕಿಯಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ , ಅಮೃತ ಈ ಚಿತ್ರದಲ್ಲೂ ಡಾಲಿಗೆ ಜೊತೆಯಾಗಿದ್ದಾರೆ. ಅಲ್ಲದೆ ಟಗರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದು ಇಂದಿನಿಂದಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಲಿದ್ದು ಪ್ರೀತಿಯ ರಾಮನ್ ಅವರ ಕ್ಯಾಮೆರಾ ಕೈಚಳಕ ಈಚಿತ್ರಕ್ಕಿರಲಿದೆ.ಇಂದಿನಿಂದಬೆಂಗಳೂರಿನ
ಸುತ್ತಮುತ್ತ ಚಿತ್ರದ ಶೂಟಿಂಗ್ ಪ್ಲಾನ್ ಮಾಡಿರುವ ಚಿತ್ರತಂಡ ಈ ವರ್ಷದ ಅಂತ್ಯಕ್ಕೆ ಬಡವ ರಾಸ್ಕಲ್ ನನ್ನು ತೆರೆಮೇಲೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.